Slide
Slide
Slide
previous arrow
next arrow

ಪುಸ್ತಕ ಖರೀದಿಸಲು ಲೇಖಕ ಪ್ರಕಾಶಕರಿಂದ ಅರ್ಜಿ ಆಹ್ವಾನ

300x250 AD

ಕಾರವಾರ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರವು 2024-25 ನೇ ಸಾಲಿನಲ್ಲಿ ಪ್ರಕಟವಾದ ಉತ್ತರ ಕನ್ನಡ ಜಿಲ್ಲೆಯ ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕವನ್ನು ಸರ್ಕಾರ ನಿಯಮಾನುಸಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ದಿನಾಂಕ: 1-1-2024 ರಿಂದ 31-12-2024 ರ ಪ್ರಥಮ ಮುದ್ರಣಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಪಠ್ಯ ಪುಸ್ತಕ ಸಾಂದರ್ಭಿಕ, ಮಕ್ಕಳ ಸಾಹಿತ್ಯ ವಿಷಯಗಳ ಕನ್ನಡ, ಆಂಗ್ಲ ಮತ್ತು ಇತರೆ ಭಾಷೆಯ ಪುಸ್ತಕವನ್ನು ಖರೀದಿಸಲು ಉತ್ತರ ಕನ್ನಡ ಜಿಲ್ಲೆಯ ಲೇಖಕ, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ತಮ್ಮ ಪುಸ್ತಕದ ಪೂರ್ಣ ವಿವರದೊಂದಿಗೆ ಖರೀದಿಗಾಗಿ 1 ಪುಸ್ತಕದ ಪ್ರತಿಯ ಅರ್ಜಿಯನ್ನು ಲಗತ್ತಿಸಿ ಫೆ.24 ರೊಳಗೆ ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ ಕಚೇರಿಗೆ ತಲುಪಬೇಕು ಮತ್ತು ಬೆಲೆ ನಿಗದಿ ಬಗ್ಗೆ ಸರ್ಕಾರದ ಆದೇಶದಂತೆ ಪುಸ್ತಕದಲ್ಲಿ ಉಪಯೋಗಿಸಿರುವ ಕಾಗದ, ಮುದ್ರಣ, ಬೈಡಿಂಗ್, ಸೈಜ್ ಇನ್ನಿತರ ವಿಷಯಕ್ಕೆ ಅನುಗುಣಕ್ಕನುಸಾರವಾಗಿ ಬೆಲೆ ನಿಗದಿಪಡಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ ಇವರನ್ನು ಸಂಪರ್ಕಿಸಿ ಅಥವಾ ಇ ಮೇಲ್ cldclkwr@gmail.com ಮುಖಾಂತರ ಸಂಪರ್ಕಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top