ಶಿರಸಿ: ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕ್ಷೇತ್ರದ ಗ್ರಾಮೀಣ ನಿವೇಶನ ರಹಿತ ಜನರಿಗೆ ಮನೆ ಮಂಜೂರಾಗಿದ್ದು, ಪ್ರಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಅತ್ಯಧಿಕ ಹೆಚ್ಚು ಮನೆ ಮಂಜೂರಾಗಿ ಬಂದಿರುವುದು ಸಂತಸವಾಗಿದೆ, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಎಲ್ಲಾ ಪಂಚಾಯತಗಳು ತಕ್ಷಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಮಂಜೂರುಗೊಳಿಸಿ ಗ್ರಾಮೀಣ ಭಾಗದ ಬಡ ಜನರಿಗೆ ವಸತಿ ಕಲ್ಪಿಸಿ ಅನುಕೂಲ ಮಾಡಬೇಕೆಂದು ಆದೇಶಿಸಿದ್ದಾರೆ. ಜಿಲ್ಲೆಗೆ ವಿಶೇಷವಾಗಿ ಹೆಚ್ಚಿನ ಮನೆ ಮಂಜೂರುಗೊಳಿಸಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ವಸತಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.