ಹೊನ್ನಾವರ: ತಾಲೂಕಿನ ಬಾಳೆಗದ್ದೆ ಕ್ರಾಸ್‌ನಲ್ಲಿ ಕಾರವಾರದಿಂದ ದಾವಣಗೆರೆಗೆ ತೆರಳುತ್ತಿದ್ದ ಬಸ್ ಹಾಗೂ ಬೈಕ್ ಅಪಘಾತವಾಗಿದೆ. ಬೈಕ್ ಸವಾರನಿಗೆ ಕಾಲಿಗೆ ಪೆಟ್ಟಾಗಿದ್ದು , ಬೈಕ್ ಸವಾರ ಜಲವಳ್ಳಿಯ ದತ್ತಾತ್ರೇಯ ಮಾಸ್ತಿ ನಾಯ್ಕ (೪೭) ಎನ್ನಲಾಗಿದೆ. ಬೈಕ್ ಸವಾರನಿಗೆ ಕಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಾಳೆಗದ್ದೆ ಕ್ರಾಸ್ ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ವೇಗವಾಗಿ ಬಂದಿದ್ದು ಬೈಕ್ ಸವಾರನಿಗೆ ಬಡಿದಿದೆ. ಅಲ್ಲದೆ ಬೈಕ್‌ನ ಹಿಂಬದಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದ ಓರ್ವ ಮಹಿಳೆಗೂ ಗಾಯಗಳಾಗಿದ್ದು , ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.