ಮೈಸೂರು:
ಮೈಸೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ ಶ್ರೀಧರ ಸ್ವಾಮೀಜಿಯವರ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ “ಭಕ್ತಿ ಗಾನ ನಮನ “ಭಕ್ತಿ ಪೂರ್ವಕವಾಗಿ ನಡೆಯಿತು. ಪ್ರಾರಂಭದಲ್ಲಿ ಶ್ರೀಧರ ಸ್ವಾಮೀಜಿಯವರ ಜಪ ಅನುಷ್ಠಾನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಹೊನ್ನಾವರದಿಂದ ಆಗಮಿಸಿದ್ದ ವಿಶ್ವೇಶ್ವರ ಹೆಗಡೆ ಅವರು ಈ ಪರಿಯ ಶಾಂತಿಯನು, ಬಜೆಮನ, ಮೊದಲಾದ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ತಬಲಾದಲ್ಲಿ ಶಿರಸಿಯ ರಾಮದಾಸ ಭಟ್ ಸಾತ್ ನೀಡಿದರು. ಹಾರ್ಮೋನಿಯಂ ಇಂದ್ರ ಕುಮಾರ್ ಅವರದಾಗಿತ್ತು. ಡಾ. ಶಿಲ್ಪ ಹೆಗಡೆ, ಗೀತಾ ಉಪಾಧ್ಯಾಯ, ಮಮತಾ ಹೆಗಡೆ, ರಶ್ಮಿ ರಘುರಾಮ್, ಶ್ರೀಧರ ಸ್ವಾಮೀಜಿಯವರ ಭಕ್ತಿಗೀತೆಗಳನ್ನು ಹಾಡಿದರು. ಬೆಂಗಳೂರಿನ ಸರಸ್ವತಿ ಹೆಗಡೆ ವ್ಯಾಖ್ಯಾನ ಮಾಡಿದರು. ಗಣೇಶ್ ಭಟ್ ಕೀಬೋರ್ಡ್ ಸಹಕಾರ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ವಿದ್ವಾನ್ ರಾಮಚಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.