ದಾಂಡೇಲಿ : ತಾಲೂಕಿನ ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ಕಳೆದು ಒಂದುವರೆ ವರ್ಷಗಳಿಂದ ಪಿಎಸ್ಐಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಪಿ.ಬಿ.ಕೊಣ್ಣೂರ ಅವರನ್ನು ಪೋಲಿಸ್ ನಿರೀಕ್ಷಕರಾಗಿ ಪದೋನ್ನತಿಗೊಳಿಸಿ ಕಾರವಾರದ ಸ್ಪೆಷಲ್ ಬ್ರಾಂಚ್ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಪಿ.ಬಿ.ಕೊಣ್ಣೂರ ಅವರು ತಮ್ಮ ಅಧಿಕಾರವನ್ನು ಅಂಬಿಕಾನಗರ ಠಾಣೆಯ ಪಿಎಸ್ಐ ಮಹೇಶ್ ಮೇಲಗೇರಿ ಅವರಿಗೆ ಹಸ್ತಾಂತರಿಸಿದರು. ಪೊಲೀಸ್ ಇಲಾಖೆಯಲ್ಲಿ ಪಿ.ಬಿ.ಕೊಣ್ಣೂರ ಅವರು ಕಳೆದ 37 ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸಿ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.