ಕಾರವಾರ: ಆರೋಗ್ಯ ಇಲಾಖೆಯಲ್ಲಿ ಜೂನ್ 27 ರಿಂದ ವರ್ಗಾವಣೆಯ ಪ್ರಕ್ರಿಯೆಯು ಕೌನ್ಸಲಿಂಗ್ ಮೂಲಕ ಪ್ರಾರಂಭವಾಗಲಿದ್ದು, ಅಂತಿಮ ವರ್ಗಾವಣೆ ಪಟ್ಟಿಯಲ್ಲಿನ ಹೆಸರುಗಳನ್ನು ಆರೋಗ್ಯ (https://hfwcom.karnataka.gov.in) Transfer ವೆಬ್ಸೈಟ್ನಲ್ಲಿ ಪಟ್ಟಿಯಲ್ಲಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಕೌನ್ಸಲಿಂಗ್ ದಿನಾಂಕವನ್ನು ಕ್ರಮ ಸಂಖ್ಯೆವಾರು ಪ್ರಕಟಿಸಲಾಗಿರುತ್ತದೆ.
ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು, ಉತ್ತರ ಕನ್ನಡ,ಕಾರವಾರ ವ್ಯಾಪ್ತಿಯ ಅಧೀನ ಸಂಸ್ಥೆಗಳ ಹಾಗೂ ಕಾರವಾರ ವೈದ್ಯಕೀಯ ಸಂಸ್ಥೆಯ ಜಿಲ್ಲಾ ಭೋಧಕ ಆಸ್ಪತ್ರೆಯಲ್ಲಿಯ ಕೌನ್ಸಲಿಂಗ್ ವರ್ಗಾವಣೆಯಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳು/ಸಿಬ್ಬಂದಿಗಳು ಕೌನ್ಸಲಿಂಗ್ ಪ್ರಕ್ರಿಯೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಚೇರಿಯಲ್ಲಿ ಹಾಜರಿರಲು ತಿಳಿಸಿದೆ.
ಬೆಳಿಗ್ಗೆ 9 ಗಂಟೆಗೆ ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದ್ದು, ಸದರಿ ಕೌನ್ಸಲಿಂಗ್ಗೆ ಹಾಜರಾಗುವ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಕೆ.ಜಿ.ಐ.ಡಿ ಸಂಖ್ಯೆ ಹೊಂದಿದ ವೇತನ ಪ್ರಮಾಣ ಪತ್ರ, ಆಧಾರ ಕಾರ್ಡ ಪ್ರತಿ ಹಾಗೂ ಇಲಾಖಾ ಗುರುತಿನ ಚೀಟಿಯೊಂದಿಗೆ ಮುಂಚಿತವಾಗಿ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.