ಶಿರಸಿ: ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ಜನವರಿ ೬ರಿಂದ ೧೦ರವರೆಗೆ ಐದು ದಿನಗಳ ಕಾಲ ನಡೆದ ಕಿತ್ತೂರು ಕರ್ನಾಟಕ ಜಾಂಬೋರೇಟನ್ನು ಜಿಲ್ಲಾ ಸ್ಕೌಟ್-ಗೈಡ್ ತರಬೇತಿ ಕೇಂದ್ರ, ದಡ್ಡಿಕಮಲಾಪುರ ಧಾರವಾಡದಲ್ಲಿ ಆಯೋಜಿಸಲಾಗಿತ್ತು. ಶಿರಸಿಯ ಲಯನ್ಸ್ ಶಾಲೆಯ ಸ್ಕೌಟ್ಸ್ ವಿಭಾಗದಿಂದ ಶ್ರೀರಾಮ ನಾಗರಟ್ಟೆ, ವಿನೀತ್ ಹೆಗಡೆ, ನರಸಿಂಹ ನಾಯಕ, ಅಭಿನವ ಭಟ್, ಲಿಖಿತ್‌ರಾಜ್ ಬಿ., ಪಾರ್ಥ ಮೂಡಿ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಜಾಂಬೋರೇಟನಲ್ಲಿ ಚಿತ್ರಕಲೆ, ರಂಗೋಲಿ, ಕಸದಿಂದ ರಸ, ಮಣ್ಣಿನಿಂದ ಆಕೃತಿ ರಚನೆ, ಪೇಪರ್ ಆಟ್ಸ್, ಮುಖವಾಡ ತಯಾರಿ, ವಿಜ್ಞಾನ ಮಾದರಿ ತಯಾರಿಕೆ, ಹೂಗಳ ರಚನೆ, ರಸಪ್ರಶ್ನೆ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಮಾಣ ಪತ್ರ ಹಾಗೂ ಪದಕಗಳನ್ನು ಪಡೆದುಕೊಂಡರು. ರಾಜ್ಯಮಟ್ಟದ ಜಾಂಬೊರೇಟ್ ನಲ್ಲಿ ಭಾಗವಹಿಸಿದ ಈ ವಿದ್ಯಾರ್ಥಿಗಳಿಗೆ, ತರಬೇತಿ ನೀಡಿದ ಶಾಲೆಯ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಹಾಗೂ ಸಹಕರಿಸಿದ ಪಾಲಕ ಪೋಷಕರಿಗೆ ಶಿರಸಿ ಲಯನ್ಸ್ ಶಾಲಾ ಕಾಲೇಜು ಸಮೂಹಗಳ ಪಾಚಾರ್ಯರಾದ ಶಶಾಂಕ ಹೆಗಡೆ ಹಾಗೂ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಶಿರಸಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಆಶಿರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.