ಮೈಸೂರು: ಪ್ರಸಕ್ತ ಸಾಲಿನ ಮಾಸ್ಕೇರಿ ಅವ್ವನ ಜಾನಪದ ಕಾವ್ಯ ಪ್ರಶಸ್ತಿಗೆ ಮೈಸೂರಿನ ಸಾಂಸ್ಕೃತಿಕ ಮಹಿಳೆ ಅನಸೂಯಾ ದೇವನೂರ ಆಯ್ಕೆ ಆಗಿದ್ದಾರೆ. ಆಯ್ಕೆ ಸಮಿತಿಯಲ್ಲಿ ನಾಡಿನ ನಾಮಾಂಕಿತ ಕವಿ ಕೃಷ್ಣ ಪದಕಿ, ತಾಳಮದ್ದಳೆ ಅರ್ಥಧಾರಿ, ಲೇಖಕಿ, ಗಾಯಕಿ, ಶಿಕ್ಷಕಿ ರೋಹಿಣಿ ಹೆಗಡೆ, ಶಂಕರ ಮುಂಗರವಾಡಿ, ರವಿ, ಐಶ್ವರ್ಯ, ಗುರುರಾಜ್, ಗೂಳೂರು ಮೊದಲಾದವರಿದ್ದರು.
ಪ್ರಶಸ್ತಿಯನ್ನು ಜ. 23,ಪುಷ್ಯಮಾಸ ಕೃಷ್ಣ ನವಮಿಯಂದು ಪ್ರದಾನ ಮಾಡಲಾಗುವುದು ಎಂದು ನಾಯಕರು ತಿಳಿಸಿದ್ದಾರೆ.