ಸಿದ್ದಾಪುರ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಚಾಲಕ ಮೃತ ಪಟ್ಟ ಘಟನೆ ಸಿದ್ದಾಪುರ – ಶಿರಸಿ ಮುಖ್ಯ ರಸ್ತೆಯ ತ್ಯಾಗಲಿ ಸಮೀಪ ಶುಕ್ರವಾರ ನಡೆದಿದೆ.
ಪೈಜುಲ್ಲಾ ಅಬ್ದುಲ್ ಸತ್ತಾರ್ ಚುಡಿದಾರ್ ( ೪೨) ಮೃತಪಟ್ಟ ವ್ಯಕ್ತಿ. ಧಾರವಾಡ ಜಿಲ್ಲೆಯ ತಿಮ್ಮಾಪುರ ತಾಲ್ಲೂಕಿನ ಹನುಮಂತ ಆನಂದ ಗೌಡ ಎಂಬಾತನು ಶಿರಸಿ ಕಡೆಯಿಂದ ಸಿದ್ದಾಪುರದ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ಕಾರು ಚಾಲಾಯಿಸಿಕೊಂಡು ಬಂದು ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಾಲಕ ಶಿರಸಿ ನಿವಾಸಿ ಪೈಜುಲ್ಲಾ ಅಬ್ದುಲ್ ಸತ್ತಾರ್ ಚುಡಿದಾರ್ ಗಂಭಿರ ಗಾಯಗೊಂಡು ಶಿರಸಿ ಪಂಡಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದು, ಹಿಂಬದಿ ಸವಾರ ಶಿರಸಿ ನಿವಾಸಿ ಸೌದ್ ಅಹಮದ್ ಅಬ್ದುಲ್ ಶುಕೂರ್ ಚುಡಿದಾರ ಎಂಬಾತನ ತಲೆ, ಮುಖ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಅಹಮದ್ ಖಾನ್ ಸ್ಥಳಿಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.