Slide
Slide
Slide
previous arrow
next arrow

ಜ.18ಕ್ಕೆ ಮೂರು ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ

300x250 AD

 ಶಿರಸಿ: ಸಾಹಿತ್ಯ ಸಂಚಲನ(ರಿ) ಶಿರಸಿ ಆಶ್ರಯದಲ್ಲಿ ಜ. 18, ಶನಿವಾರ ಅಪರಾಹ್ನ 3 ಗಂಟೆಗೆ,  ತೋಟಗಾರರ ಕಲ್ಯಾಣ ಮಂಟಪ ಕೋರ್ಟ್ ರಸ್ತೆ ಶಿರಸಿಯಲ್ಲಿ  ಮೂರು ಸಾಹಿತ್ಯ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಹಿರಿಯ ಸಾಹಿತಿ ಡಿ.ಎಮ್.ಭಟ್ಟ ಕುಳವೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕವಯಿತ್ರಿ ನಾಗರತ್ನಾ ಲೋಕೇಶ ಅವರ ಚೊಚ್ಚಲ ಕೃತಿ “ಭಾವಲೋಕದ ಗಂಗೆ” ಮತ್ತು “ಗಣಪ ಗುರುವಿನ ಮಣಿಮಾಲೆ” ಕವನ ಸಂಕಲನಗಳನ್ನು  ಜಾನಕಿ ಗಣಪತಿ ಹೆಗಡೆ, ಬಪ್ಪನಳ್ಳಿ  ಲೋಕಾರ್ಪಣೆ ಮಾಡಲಿದ್ದಾರೆ. ಶಿರಸಿಯ ಸಾಹಿತಿ ಭವ್ಯ ಹಳೆಯೂರು ಮತ್ತು ಮೈಸೂರಿನ ಸಾಹಿತಿ ಕೆ.ಟಿ. ಶ್ರೀಮತಿ ಕೃತಿಗಳ ಪರಿಚಯವನ್ನು ಮಾಡಲಿದ್ದಾರೆ.

ನಂತರದಲ್ಲಿ  ದಿ| ಅರುಣಾ ಹೆಗಡೆ, ಅಪ್ಪೆಕಟ್ಟು ಅವರ “ನೀಲನಭಕೆ ನೂಲೇಣಿ” ಕವನ ಸಂಕಲನವನ್ನು ಲಕ್ಷ್ಮಿ ಹೆಗಡೆ ಹಲಸಿನಳ್ಳಿ  ಲೋಕಾರ್ಪಣೆಗೊಳಿಸಲಿದ್ದು, ಬರೆಹಗಾರ್ತಿ ಯಶಸ್ವಿನಿ ಶ್ರೀಧರಮೂರ್ತಿಯವರು ಕೃತಿ ಪರಿಚಯಿಸಲಿದ್ದಾರೆ.  ಹಿರಿಯ ಕಥೆಗಾರ ಡಿ. ಎಸ್. ನಾಯ್ಕ್,  ಹಿರಿಯ ಕವಿ ಡಿ. ಎಸ್. ಭಟ್ ಓಡ್ಲಮನೆ, ಸಾಹಿತ್ಯ ಪ್ರೇಮಿ  ಸುಬ್ರಾಯ ಹೆಗಡೆ ಊರತೋಟ,  ಪರಿಸರ ತಜ್ಞ ಸಾಹಿತಿ ಶಿವಾನಂದ ಕಳವೆ,  ನೇತ್ರ ತಜ್ಞೆ ಡಾ.ತನುಶ್ರೀ,  ಮೈಸೂರಿನ ಕವಿ ಅನಂತ ಎಮ್ ತಾಮ್ಹನಕರ್, ಬರೆಹಗಾರ  ಮಹೇಶ ಹೆಗಡೆ ಸಿದ್ದಾಪುರ, ಕೃತಿಗಾರ್ತಿ ನಾಗರತ್ನಾ ಲೋಕೇಶ ಮತ್ತು  ಸಾಹಿತ್ಯ ಸಂಚಲನದ  ಅಧ್ಯಕ್ಷರಾದ ಕೃಷ್ಣ ಪದಕಿ ಅವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.

300x250 AD

 ವಿಶೇಷ ಆಮಂತ್ರಿತರಾಗಿ ಡಾ. ಜಿ ಎ ಹೆಗಡೆ ಸೋಂದಾ,  ಮನೋಹರ ಮಲ್ಮನೆ, ಎಂ.ಪಿ. ಹೆಗಡೆ ಬಪ್ಪನಳ್ಳಿ, ರಾಜು ಉಗ್ರಾಣಕರ, ಬಿ.ಡಿ. ಹೆಗಡೆ ದೊಡ್ಮನೆ,  ಲಕ್ಷ್ಮಣ ಹೆಗಡೆ ಹೆಲೇಮಳಗಿ, ಲೋಕೇಶ ಹೆಗಡೆ ಹುಲೇಮಳಗಿ,  ಮಂಜುನಾಥ ಹೆಗಡೆ ಅಪ್ಪೆಕಟ್ಟು, ಸಿ.ಎಸ್. ಹೆಗಡೆ, ಡಾ. ಶೈಲಜಾ ಮಂಗಳೂರು, ಜಗದೀಶ ಭಂಡಾರಿ, ಶರಾವತಿ ಭಟ್ಟ,  ರವಿ ಅಳ್ಳಂಕಿ, ನಾಗೇಂದ್ರ ಮುತ್ಮುರ್ಡು, ಪ್ರತಿಭಾ ಎಂ. ನಾಯ್ಕ್, ಎ. ಆರ್. ಹೆಗಡೆ ಹೂಡ್ಲಮನೆ, ವಿ.ಪಿ.ಹೆಗಡೆ ವೈಶಾಲಿ, ಗಣಪತಿ ಭಟ್ಟ ವರ್ಗಾಸರ, ಡಾ.ಅಂಬರ,  ವಿಜಯಾ ಗ ಶೆಟ್ಟಿ,  ಸರೋಜಾ ಪೋತದಾರ, ಬಿಂದು ಹೆಗಡೆ ಮತ್ತು ಶೋಭಾ ಭಟ್ ಅವರುಗಳು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮವನ್ನು ಕವಯಿತ್ರಿ ರೋಹಿಣಿ ಹೆಗಡೆ ನಿರೂಪಿಸಲಿದ್ದು, ಕವಯಿತ್ರಿ ದಾಕ್ಷಾಯಿಣಿ ಪಿ ಸಿ ನಿರ್ವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top