ಶಿರಸಿ: ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಮಹಿಳೆಯರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ, ಜೀವ ವಿಮಾ ಉದ್ಯಮದಲ್ಲಿ ಮೊದಲ ಬಾರಿಗೆ ಒದಗಿಸಲಾಗುತ್ತಿರುವ ಮಹಿಳಾ ವಿಶೇಷ ಆರೋಗ್ಯ ಉತ್ಪನ್ನವಾದ ‘ಐಸಿಐಸಿಐ ಪ್ರು ವಿಶ್’ ಅನ್ನು ಬಿಡುಗಡೆ ಮಾಡಿದೆ. ಐಸಿಐಸಿಐ ಪ್ರು ವಿಶ್ ವಿಮಾ ಉತ್ಪನ್ನವು ಸ್ತನ, ಗರ್ಭಕಂಠ, ಗರ್ಭಾಶಯದ ಕ್ಯಾನ್ಸರ್ ಮತ್ತು ಹೃದಯದ ಕಾಯಿಲೆಗಳಂತಹ ಗಂಭೀರ ಕಾಯಿಲೆಗಳ ರೋಗನಿರ್ಣಯದ ಆಧಾರದಲ್ಲಿ ಹೆಲ್ತ್ ಕವರ್ ಮೊತ್ತದ ಶೇ.100 ರಷ್ಟನ್ನು ತಕ್ಷಣವೇ ಪಾವತಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೀಮಿಯಂ ಮೊತ್ತವು 30 ವರ್ಷಗಳ ಅವಧಿಗೆ ಸ್ಥಿರವಾಗಿರುತ್ತದೆ. ಹೀಗಾಗಿ ಗ್ರಾಹಕರು ತಮ್ಮ ಹಣದ ಹೊರಹರಿವನ್ನು ಉತ್ತಮ ರೀತಿಯಲ್ಲಿ ಯೋಜನೆ ಮಾಡಲು ಈ ಉತ್ಪನ್ನವು ಅನುವು ಮಾಡಿಕೊಡುತ್ತದೆ. ಈ ಉತ್ಪನ್ನದ ಮತ್ತೊಂದು ವಿಶೇಷ ಫೀಚರ್ ಎಂದರೆ ಅದು ಪ್ರೀಮಿಯಂ ಹಾಲಿಡೇ. ಪ್ರೀಮಿಯಂ ಹಾಲಿಡೇ ಅಂದರೆ ಗ್ರಾಹಕರು ಪ್ರೀಮಿಯಂ ಪಾವತಿಸಬೇಕಾದ ಅವಧಿಯಲ್ಲಿ ಅವರಿಗೆ ಬೇಕಾದ ಯಾವುದೇ ಸಮಯದಲ್ಲಿ 12 ತಿಂಗಳ ಅವಧಿಗೆ ಪ್ರೀಮಿಯಂ ಅನ್ನು ಪಾವತಿಸದಿರುವ ಆಯ್ಕೆಯನ್ನು ಮಾಡಬಹುದಾಗಿದೆ.ವಿಶೇಷವಾಗಿ ಈ ಉತ್ಪನ್ನದಲ್ಲಿ ಗ್ರಾಹಕರು ಮಾತೃತ್ವ ಕುರಿತು ಸಮಸ್ಯೆ ಎದುರಿಸಿದರೆ ಮತ್ತು ನವಜಾತ ಜನ್ಮಜಾತ ಕಾಯಿಲೆಗಳಿಗೆ ಸಂಬಂಧಿಸಿದ ಕವರೇಜ್ ಅನ್ನು ಪಡೆಯುವ ಆಯ್ಕೆ ದೊರೆಯುತ್ತದೆ.
ಈ ಕುರಿತು ಮಾತನಾಡಿರುವ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ನ ಮುಖ್ಯ ಉತ್ಪನ್ನ ಮತ್ತು ವಿತರಣಾ ಅಧಿಕಾರಿ ಅಮಿತ್ ಪಾಲ್ಟಾ, “ಐಸಿಐಸಿಐ ಪ್ರು ವಿಶ್ ಉತ್ಪನ್ನವು ವಿಶೇಷವಾಗಿ ಮಹಿಳೆಯರ ಆರೋಗ್ಯ ರಕ್ಷಣೆಗಾಗಿಯೇ ವಿನ್ಯಾಸಗೊಳಿಸಲಾದ ಜೀವ ವಿಮಾ ಉದ್ಯಮದಲ್ಲಿನ ಮೊತ್ತ ಮೊದಲ ಆರೋಗ್ಯ ವಿಮಾ ಉತ್ಪನ್ನವಾಗಿದೆ. 30 ವರ್ಷಗಳವರೆಗೆ ಪ್ರೀಮಿಯಂ ಗ್ಯಾರಂಟಿ ಒದಗಿಸುವುದರ ಜೊತೆಗೆ, ಗ್ರಾಹಕರು ಹಲವು ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಲು ಹಲವು ಕ್ಲೈಮ್ ಗಳನ್ನು ಮಾಡಬಹುದಾದ ರೀತಿಯಲ್ಲಿ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಪಡೆದ ಹೆಚ್ಚುವರಿ ಮೊತ್ತವು ಅವರು ಮತ್ತೆ ಸಹಜ ಸ್ಥಿತಿಗೆ ಮರಳಲು ನೆರವಾಗುತ್ತದೆ” ಎಂದು ಹೇಳಿದರು.