Slide
Slide
Slide
previous arrow
next arrow

ಅಂಗನವಾಡಿಗೆ ಖುರ್ಚಿ ದೇಣಿಗೆ ನೀಡಿದ ಮಾಸ್ತಪ್ಪ ನಾಯ್ಕ್

300x250 AD

ಭಟ್ಕಳ: ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಬರುವ  14 ಅಂಗನವಾಡಿ ಕೇಂದ್ರಕ್ಕೆ ಯಂಗ್ ಒನ್ ಇಂಡಿಯಾ ಮಾಲೀಕರಾದ ಮಾಸ್ತಪ್ಪ ನಾಯ್ಕ 300 ಖುರ್ಚಿಗಳನ್ನು ನೀಡುವ ಮೂಲಕ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.

ಪುಟಾಣಿ ಮಕ್ಕಳಿಗೆ ಪುಟ್ಟ ಪುಟ್ಟ ಖುರ್ಚಿಗಳೆಂದರೆ ಅದೇನೋ ಆಕರ್ಷಣೆ. ಮನೆಯಲ್ಲಿ ಮಕ್ಕಳಿದ್ದರೆ ಇದು ಅನುಭವಕ್ಕೆ ಬಂದಿರುತ್ತದೆ. ಮಕ್ಕಳ ಮನಸ್ಸನ್ನು ಬಲ್ಲ ಮಗುವಿನಂತ ಮನಸ್ಸಿನ ಯುವ ಉದ್ಯಮಿ‌ ಹಾಗೂ ಸಮಾಜ ಸೇವಕ ಮಾಸ್ತಪ್ಪ ನಾಯ್ಕ ತಮ್ಮ ಸಮಾಜಮುಖಿ ಕೆಲಸದಿಂದ ಭಟ್ಕಳ ತಾಲೂಕಿನಾದ್ಯಂತ ಮನೆಮಾತಾಗಿದ್ದರೆ. ಸದ್ಯ ಇವರು  ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 14 ಅಂಗನವಾಡಿ ಕೇಂದ್ರಕ್ಕೆ ಒಟ್ಟು 300 ಖುರ್ಚಿಗಳನ್ನು ನೀಡುವ ಮೂಲಕ ತಮಗೆ ಶಿಕ್ಷಣದ ಮೇಲಿರುವ ಅಭಿಮಾನವನ್ನು ತೋರಿದ್ದಾರೆ.

300x250 AD

ಈ ವೇಳೆ ಮಾಸ್ತಪ್ಪ ನಾಯ್ಕರ ಆಪ್ತರಾದ ವಿಶ್ವ ನಾಯ್ಕ,. ರಾಘು ನಾಯ್ಕ, ನವೀನ ನಾಯ್ಕ,ಅಶೋಕ ನಾಯ್ಕ, ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು

Share This
300x250 AD
300x250 AD
300x250 AD
Back to top