ಹೊನ್ನಾವರ: ಹೊನ್ನಾವರ ಪ್ರಮುಖ ವಿಷ್ಣುವಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ ನಡೆಯಿತು.
ದೇಶದಾದ್ಯಂತ ಹಲವು ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿ ನಡೆಯುತ್ತಿದೆ. ಇಂದು ವೈಕುಂಠ ದ್ವಾರದ ಮೂಲಕ ಭಗವಂತನ ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಪ್ರತೀತಿ ಇರುವುದರಿಂದ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ ಜನ ಪುನೀತರಾಗುತ್ತಾರೆ.
ಇನ್ನು ಪಟ್ಟಣದ ದುರ್ಗಾಕೇರಿಯ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ನಿಮಿತ್ತ ಶ್ರೀದೇವರಿಗೆ ವಿಶೇಷ ಹೂವಿನ ಅಲಂಕಾರ,ವಿವಿಧ ಸೇವೆ,ನೈವೇದ್ಯ ನಡೆಯಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ಶ್ರೀಸನ್ನಿದಿಗೆ ಆಗಮಿಸಿ ಆರತಿ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ,ಮಡ್ಡಿ ನೈವೈದ್ಯ ಸೇರಿದಂತೆ ಇನ್ನಿತರ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ಧನ್ಯರಾದರು. ಶ್ರೀ ದೇವರಿಗೆ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು.