ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಹೆದ್ದಾರಿಯಲ್ಲಿ ದುರಸ್ಥಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಂಟೇನರ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಕೊಪ್ಪಳದ ಕುಷ್ಟಗಿ ಮೂಲದ ಅಮ್ಜದ್ (40) ಸ್ಥಳದಲ್ಲೇ ಸಾವನಪ್ಪಿದ ಕಾರ್ಮಿಕನಾಗಿದ್ದಾನೆ.
ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಯಾಚ್ ವರ್ಕ್ ಕಾರ್ಯ ನಡೆಯುತ್ತಿದ್ದು, ಈ ವೇಳೆ ಕೆಲಸದಲ್ಲಿ ನಿರತನಾಗಿದ್ದ ಕಾರ್ಮಿಕನ ಮೇಲೆ ವೇಗವಾಗಿ ಬಂದ ಕಂಟೇನರ್ ನಿಯಂತ್ರಣ ಸಿಗದೇ ಕಾರ್ಮಿಕನ ಮೇಲೆ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ.