Slide
Slide
Slide
previous arrow
next arrow

ಆಧುನಿಕ ಯುಗದಲ್ಲಿ ಜನಪದ ಗೀತೆ ಕಣ್ಮರೆ: ವಿಕ್ರಮ್ ನಾಯ್ಕ್

300x250 AD

ಹೊನ್ನಾವರ : ಇಂದು ನಮ್ಮಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಜನಪದಗೀತೆ ಹಾಡುವ ಕಲೆ ಮರೆಯಾಗಿದೆ. ಇಂದಿನವರು ಅಂತಹ ಹಾಡುಗಳ ಕಲಿಯುವ ಇಚ್ಚೆಯು ತೋರುತ್ತಿಲ್ಲ. ಇಂದು ಬಿಡುಗಡೆಗೊಂಡ ನಾಮಧಾರಿ ಜನಪದ ಕಥನ ಗೀತೆಗಳಲ್ಲಿ ಇಂತಹ ಹಲವಾರು ಗೀತೆಗಳನ್ನು ಲೇಖಕರು ಪ್ರಕಟಿಸಿದ್ದಾರೆ. ಇದು ಅಭಿನಂಧನಕಾರ್ಯ. ಈ ಪುಸ್ತಕ ಸಮಾಜದ ಸಹೃದಯರ ಕೈಗೆ ಸೇರುವಂತಾಗಲು ನಾವು ಸಹಕಾರ ನೀಡುತ್ತೇವೆ ಎಂದು ನ್ಯಾಯವಾದಿ ವಿಕ್ರಂ ನಾಯ್ಕ ಹೇಳಿದರು.

ಅವರು ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಡೆದ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಸಮಿತಿ, ಹೊನ್ನಾವರ, ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಮಾಲೆಯ ಮೂರನೇ ಸಂಪುಟ ಡಾ.ಎಲ್.ಆರ್. ಹೆಗಡೆಯವರು ಸಂಪಾದಿಸಿದ “ನಾಮಧಾರಿ ಜನಪದ ಕಥನ ಗೀತೆಗಳು” ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಮಧಾರಿ ಜನಪದ ಕಥನ ಗೀತೆಗಳು ಗ್ರಂಥ ಬಿಡುಗಡೆಗೊಳಿಸಿದ ಖ್ಯಾತ ಹೃದಯರೋಗ ತಜ್ಞ ಡಾ. ಪ್ರಕಾಶ ನಾಯ್ಕ ಮಾತನಾಡಿ, ನಮ್ಮ ಮೂಲ ಸಂಸ್ಕೃತಿಯನ್ನು,ದಿನದ ಆಗುಹೋಗುಗಳನ್ನು ಜತೆಗೆ ಹೇಗೆ ಬದುಕಬೇಕೆಂಬುದನ್ನು ಕೃತಿಯಲ್ಲಿ ಹೇಳಲಾಗಿದೆ. ಇಂತಹ ಪುಸ್ತಕ ಓದುವುದು ಒಂದು ಪುಣ್ಯದ ಕೆಲಸ‌. ಸಮಯ ಹೊಂದಿಸಿಕೊಂಡಿಯಾದರು ಇದನ್ನು ಓದಬೇಕು. ನಮ್ಮ ಸಮಯ ನಿರ್ವಹಣೆ ಮಾಡಿಕೊಂಡರೆ ಇಂತಹ ಕೃತಿಗಳನ್ನು ರಚಿಸಬಹುದು ಎಂದರು.

ಉಪನ್ಯಾಸಕ ಉಮೇಶ ನಾಯ್ಕ ಶಿರಸಿ ಗ್ರಂಥ ಪರಿಚಯಿಸಿದರು. ಜಾನಪದ ಹಾಡುಗಾರ್ತಿ ಗೌರಿ ನಾಗಪ್ಪ ನಾಯ್ಕ,ಶಿರೂರು ಹಾಗೂ ಗ್ರಂಥ ಬಿಡುಗಡೆಗೆ ಆರ್ಥಿಕವಾಗಿ ಸಹಕರಿಸಿದವರನ್ನು ಸನ್ಮಾನಿಸಿದರು. ಗೌರಿ ನಾಯ್ಕ ಮತ್ತು ಗೋವಿಂದ ನಾಯ್ಕ ಕೋನಳ್ಳಿ ಜನಪದ ಗೀತೆ ಪ್ರಸ್ತುತಪಡಿಸಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ,ನಾವು ಬೇರೆಯವರನ್ನು ಹೋಗಳುತ್ತೇವೆ,ಆದರೆ ನಮ್ಮದು ಅಂದರೆ ಅಸಡ್ಡೆ. ಅದಕ್ಕಾಗಿ ನಾವು ಉಳಿದಸಮಾಜದ ಹಾಗೇ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮವರ ಪ್ರೋತ್ಸಾಹಿಸುವ ಕಾರ್ಯ ಆಗಬೇಕು.ಇಂತಹ ಪುಸ್ತಕಗಳು ಮುಂದಿನ ಪೀಳಿಗೆಗೆ ನಮ್ಮ ಸಮುದಾಯದ ಸಂಸ್ಕ್ರತಿ, ಆಚರಣೆ ಪರಂಪರೆಯನ್ನು ತಿಳಿಸಿಕೊಡುತ್ತದೆ ಎಂದರು.

ವೇದಿಕೆಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್ ನಾಯ್ಕ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ. ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುದೀಶ ನಾಯ್ಕ, ಚಿಕ್ಕನಕೋಡ ವಿ.ಎಸ್.ಎಸ್. ಅಧ್ಯಕ್ಷ ಆರ್.ಪಿ. ನಾಯ್ಕ , ಆರ್.ಎಮ್. ನಾಯ್ಕ ನವಿಲಗೋಣ, ರಾಮಚಂದ್ರ ನಾಯ್ಕ, ವಿ.ಜಿ. ನಾಯ್ಕ ಮತ್ತಿತರಿದ್ದರು. ಶಿಕ್ಷಕ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top