ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೊಸೈಟಿ ಆವರಣವು ಡಿ. 28, ಶನಿವಾರ ಒಂದು ದಿನದ ಹೆಗಡೆಕಟ್ಟಾ ಹಬ್ಬಕ್ಕೆ ಸಜ್ಜಾಗಿದೆ. ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ, ಬೃಹತ್ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಇತಿಹಾಸದಲ್ಲಿಯೇ ಬಹುತೇಕ ಎಲ್ಲಾ ತರಹದ ಅಂಗಡಿಗಳು ಒಂದೇ ಆವರಣದಲ್ಲಿ ನೋಡಲು ಸಿಗಲಿದೆ.
ಕೃಷಿ ನೀವು ನೋಡಲೇಬೇಕಾದ ವಿಷಯಗಳಿವು:
* ಯುವ ಜೇನು ಕೃಷಿಕ ಸಂತೋಷ್ ಹೆಗಡೆ ಅವರಿಂದ ಜೇನು ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ಮತ್ತು ಪ್ರದರ್ಶನ
* ಅಮೋಘ ಇ ಮೋಟರ್ಸ್, ಈಸಿ ಲೈಫ್, ವೀರಾಂಜನೇಯ ಇಲೆಕ್ಟಿಕ್ ಸಹಯೋಗದಲ್ಲಿ ಕರೆಂಟಿನಿಂದ ಹಾಗೂ ಪೆಟ್ರೋಲ್ ನಿಂದ ತೋಟದಲ್ಲಿಯೂ ಚಲಿಸುವ ವಾಹನ ಪ್ರಾತ್ಯಕ್ಷಿಕೆ.
* ವುಡ್ ಚಿಪ್ಪರ್- ಸೊಪ್ಪಿನಿಂದ ಗೊಬ್ಬರ ತಯಾರಿಕೆ ಡೆಮೋ
* ಈಸಿ ಕಟ್- ಕಟ್ಟಿಗೆ ಕತ್ತರಿಸುವ ಮಷೀನ್ ಪ್ರಾತ್ಯಕ್ಷಿಕೆ, * ಹೈಪರ್ ವಾಷ್ ಕೊಟ್ಟಿಗೆ, ಕಾರು ತೊಳೆಯುವ ಮಷೀನ್ ಪ್ರದರ್ಶನ
* ಬಿಸಿಲು ಮನೆ- ಮೋಡ, ಮಳೆಯಲ್ಲಿಯೂ ಅಡಿಕೆ ಒಣಗಿಸುವ ಮಾದರಿ ಬಿಸಿಲು ಮನೆ ಬಗ್ಗೆ ಮಾಹಿತಿ
* ಮಂಕಿ ಗನ್- ಮಂಗನ ಓಡಿಸುವ ಹೊಸ ತಂತ್ರಜ್ಞಾನ ಪ್ರದರ್ಶನ
* ಮನೆಯಲ್ಲಿ ಕುಳಿತು ಬೆಳೆ ರಕ್ಷಣೆ ಮಾಡುವ ಹೊಸ ವೈವಿಧ್ಯತೆ ಹೊಂದಿರುವ ಸಿಸಿ ಕ್ಯಾಮೆರಾ
* ಸೋಲಾರ್ ಪಂಪ್ ನೀರು ಹರಿಸುವಿಕೆ ಪ್ರಾತ್ಯಕ್ಷಿಕೆ ನಡೆಯಲಿದೆ
ಹೆಗಡೆಕಟ್ಟಾ ಸೊಸೈಟಿಯಿಂದ ಆಕರ್ಷಕ ಡಿಸ್ಕೌಂಟ್ ಮತ್ತು ವಿನಿಮಯ:
ಹೆಗಡೆಕಟ್ಟಾ ಸೊಸೈಟಿ ಶಿರಸಿ ಹಾಗೂ ಹೆಗಡೆಕಟ್ಟಾ ಸುತ್ತಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಮಾರಾಟ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಹೊಸ ಹೊಸ ಆಫರ್‌ಗಳನ್ನು ಡಿಸೆಂಬರ್ 28ರಂದು ಬಿಡುಗಡೆ ಮಾಡಲಿದೆ. ಫ್ರಿಡ್ಜ್, ವಾಷಿಂಗ್ ಮಷೀನ್, ಕುಕ್ಕರ್, ಮಿಕ್ಸರ್ ಆಕರ್ಷಕ ದರದಲ್ಲಿ ಮಾರಾಟ ಹಾಗೂ ವಿನಿಮಯ ಸೌಲಭ್ಯ ಕೂಡ ಇದೆ. ಇದು ಶಿರಸಿ ಸುತ್ತಲಿನ ಜನತೆಗೆ ಕೊಳ್ಳಲು ಅತ್ಯುತ್ತಮ ಅವಕಾಶವಾಗಿದೆ.
ವಾಷಿಂಗ್ ಮಷೀನ್ ಕೇವಲ ₹5900 ರಿಂದಲೇ ಆರಂಭಗೊಳ್ಳಲಿದೆ. ಎಲ್ಇಡಿ ಟಿವಿ ₹8500, ಒಂದು ವರ್ಷದ ವಾರಂಟಿಯೊಂದಿಗೆ ಸಿಗಲಿದೆ. ಗುಣಮಟ್ಟದ ಫ್ರಿಡ್ಜ್ 10 ವರ್ಷ ವಾರಂಟಿಯೊಂದಿಗೆ ₹15000 ಕ್ಕೆ ಕೊಂಡುಕೊಳ್ಳಬಹುದಾಗಿದೆ. ಸ್ಮಾರ್ಟ್ ಟಿವಿ ಕೂಡ ಕಡಿಮೆ ದರದಲ್ಲಿಕೊಳ್ಳಬಹುದು ಇವುಗಳ ಮೇಲೆ ಕೂಡ ಸಾಲ ಸೌಲಭ್ಯ ಒದಗಿಸಲಾಗಿದೆ. ಇಸ್ತ್ರಿ ಪೆಟ್ಟಿಗೆ ₹500 ರಿಂದಲೇ ಆರಂಭ
ಅಲ್ಲದೆ ಹಳೆಯ ಫ್ರಿಜ್, ವಾಷಿಂಗ್ ಮಷೀನ್, ಕುಕ್ಕರ್ ವಿನಿಮಯ ಮಾಡಿ ಹೊಸದು ತೆಗೆದುಕೊಳ್ಳಬಹುದು.
ಮಿಕ್ಸರ್, ಗ್ರೈಂಡರ್, ಇಂಡಕ್ಷನ್ ಒಲೆ ಸೇರಿದಂತೆ ಎಲೆಕ್ಟ್ರಾನಿಕ್ಸ್ ಗೃಹ ಉಪಯೋಗಿ ವಸ್ತುಗಳ ಮೇಲೆ ಇನ್ನಷ್ಟು ಮತ್ತಷ್ಟು ರಿಯಾಯಿತಿ ಇರಲಿದೆ
ಸ್ಟೀಲ್ ಪಾತ್ರೆಗಳು, ರೂಪಾಯಿ 150ರಿಂದಲೇ ಸೀರೆ, ಕಾಟನ್ ಸೀರೆ, ಸಿಲ್ಕ್ ಸೀರೆ, ಚಾದರ, ಟವೆಲ್, ನೈಟಿ ಸೇರಿದಂತೆ ಬಟ್ಟೆಗಳ ಮಾರಾಟ ಮೇಳ ಕೂಡ ಇದೆ
ವಿಶೇಷ ಆಫರ್ ಕೌಂಟರ್:
ಇಲ್ಲಿ ಯಾವುದೇ ಒಂದು ವಸ್ತು ಕೊಂಡಲ್ಲಿ ಒಂದೋ ರಿಯಾಯಿತಿ ಇರುತ್ತದೆ, ಅಲ್ಲದೆ ಒಂದಷ್ಟು ವಸ್ತುಗಳಿಗೆ ಒಂದಕ್ಕೊಂದು ಉಚಿತ ಇರುತ್ತದೆ, ಇಲ್ಲವೇ ಒಂದು ವಸ್ತುವಿಗೆ ಮತ್ತೊಂದು ವಸ್ತುವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಕೌಂಟರ್ ನಲ್ಲಿ ಐದು ನೂರು ರೂಪಾಯಿ ಮೌಲ್ಯದ ವಸ್ತು ಖರೀದಿಸಿದಲ್ಲಿ ಆಕರ್ಷಕ ಲಕ್ಕಿ ಡಿಪ್ ಇದ್ದು, ಟ್ರಾವೆಲ್ ಬ್ಯಾಗ್, ಕಿಚನ್ ಸೆಟ್, ಎಲ್ಇಡಿ ಬಲ್ಬ್ ಗೆಲ್ಲುವ ಅವಕಾಶ ಕೂಡ ಇದೆ.
ಹಳ್ಳಿಯಲ್ಲಿಯೂ ಆನ್ಲೈನ್ ದರದಲ್ಲಿ ಸ್ಮಾರ್ಟ್ ಫೋನ್..!:
ಶಿರಸಿಯ ಜಿ.ವಿ. ಮೊಬೈಲ್ಸ್ ಸಹಯೋಗದಲ್ಲಿ ಸ್ಮಾರ್ಟ್ ಫೋನ್ ಆನ್ಲೈನ್ ದರದಲ್ಲಿ ಹೆಗಡೆಕಟ್ಟಾದಲ್ಲಿ ಲಭ್ಯವಾಗಲಿದೆ ಜೊತೆಗೆ ಹಳೆಯದು ವಿನಿಮಯಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ ಸ್ಮಾರ್ಟ್ ವಾಚ್ ನೆಕ್ ಬ್ಯಾಂಡ್ ಇಯರ್ ಫೋನ್ ಮತ್ತಿತರ ಎಕ್ಸಸರಿಸ್ಗಳು ಕೂಡ ಸಿಗುತ್ತಿದೆ. ನಿಯಮಾನುಸಾರ ಅರ್ಹತೆ ಇದ್ದಲ್ಲಿ ಸ್ಥಳದಲ್ಲಿಯೇ ಇಎಂಐ ಸೌಲಭ್ಯ ಕೂಡ ಮಾಡಿಕೊಡಲಾಗುತ್ತದೆ. ಹೆಗಡೆಕಟ್ಟಾ ಹಬ್ಬದಲ್ಲಿ ಸ್ಮಾರ್ಟ್ ಫೋನ್ ಕೊಂಡರೆ ವಿಶೇಷ ಬಹುಮಾನ ಗೆಲ್ಲಲು ಕೂಡ ಅವಕಾಶವಿದೆ.
ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳಲು ಪೇಟೆಗೆ ಹೋಗಬೇಕಿಲ್ಲ..!
ಅಮೋಘ ಇ ಮೋಟರ್ಸ್ ಹೆಗಡೆಕಟ್ಟಾ ಹಬ್ಬಕ್ಕಾಗಿ ವಿಶೇಷ ರಿಯಾಯತಿಯೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜನತೆಗೆ ದೊರಕಿಸಿಕೊಡಲಿದೆ ಸ್ಕೂಟರ್ ಕೊಳ್ಳುವ 3 ಯೋಜನೆಗಳು ಅಂದೇ ಬಿಡುಗಡೆಯಾಗಲಿದೆ.
ಉಡುಪಿ ರಸಂ, ಶೇಂಗಾ, ಪುಟಾಣಿ ಚಟ್ನಿ ಪುಡಿ:
ಸಂಚಯ ಗ್ರೂಪ ನ ಹೆಗ್ಗೆರೆ ಫುಡ್ ಪ್ರಾಡಕ್ಟ್ಸ್ ರುಚಿಕರ ಉಡುಪಿ ರಸಂ, ಇಡ್ಲಿಗಾಗಿಯೇ ಇರುವ ಸಾಂಬಾರ್ ಪುಡಿ, ವಿವಿಧ ಮಾದರಿಯ ಚಟ್ನಿಪುಡಿ, ಆರೋಗ್ಯಕರ ಮೆಂತೆ ಕೂಟ್, ಬಹು ಉಪಯೋಗಿ, ಇಂಗು ಹೆಗಡೆಕಟ್ಟಾ ಆಫರ್ ಕೌಂಟರ್‌ನಲ್ಲಿ ಸಿಗಲಿದೆ
ನೋವು ನಿವಾರಕ ಎಕ್ಕದ ಎಣ್ಣೆ:
ನೋವು ಹೊಡೆದೋಡಿಸುವ ಸ್ಪೆಷಲ್ ಎಕ್ಕದ ಎಣ್ಣೆ ಹೆಗಡೆಕಟ್ಟಾ ಆಫರ್ ಕೌಂಟರ್ ನಲ್ಲಿ ಸಿಗಲಿದೆ. ಮಂಡಿ ನೋವು, ಮಾಂಸ ಖಂಡದ ನೋವು, ಬೆನ್ನು ನೋವು ಸರ್ವಾಂಗ ವಾಯು, ಲಕ್ವಾ ಬಿದ್ದುಪೆಟ್ಟಾದರೆ, ಮಧುಮೇಹದಿಂದ ಉಂಟಾದ ಗಾಯಕ್ಕೆ ಅತ್ಯುಪಯುಕ್ತ ಎನಿಸಿರುವ ನೋವು ನಿವಾರಕ ಎಣ್ಣೆ ಕೂಡ ಸಿಗಲಿದೆ
ತಾಜಾ ತಾಜಾ ಕಬ್ಬಿನ ಹಾಲು:
ಸ್ಥಳದಲ್ಲಿಯೇ ತಾಜಾ ತಾಜಾ ಕಬ್ಬಿನ ಹಾಲು ಅದರಲ್ಲಿಯೂ ಶುಂಠಿ ಹಾಲು ಲಿಂಬು ಹಾಲು, ಸಾದಾ ಹಾಲು ಹಾಗೂ ಮಸಾಲ ಮಂಡಕ್ಕಿ ಲಭ್ಯವಾಗಲಿದೆ ಖರೀದಿಸಿ ಕುಡಿಯಲು ಮತ್ತು ಮನೆಗೆ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ.
ಪಂಚಲಿಂಗ ಶಾಲಾ ಮಕ್ಕಳ “ಖಾದ್ಯ ಚೌಕಿ”:
ವ್ಯಾಪಾರ ಮಾಡುವ ಅನುಭವಕ್ಕಾಗಿ ಪಂಚಲಿಂಗ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಾವೇ ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸು ಮೇಳಕ್ಕೆ ತಂದು ಬಂದ ಸಾರ್ವಜನಿಕರಿಗೆ ಮಾರಾಟ ಮಾಡಿ ವ್ಯವಹಾರಿಕ ಅನುಭವ ಪಡೆದುಕೊಳ್ಳಲಿದ್ದಾರೆ. ಅಂದರೆ ಮಕ್ಕಳು ಇಲ್ಲಿ ವ್ಯಾಪಾರಸ್ಥರು ನೀವು ಗ್ರಾಹಕರು..!
ಹಳೆಯ ರೇಷ್ಮೆ ಜರಿ ಸೀರೆ, ಜರಿ ಇರುವ ಮಡಿ ಖರೀದಿಸಲಾಗುತ್ತದೆ:
ಉಡುಪಿಯ ಶ್ರೀ ಲಕ್ಷ್ಮಿ ಕಂಚಿ ಸಾರಿಸ್ ಅವರು ಹಳೆಯ, ಹರಿದ ರೇಷ್ಮೆ ಜರಿ ಸೀರೆ ಮತ್ತು ರೇಷ್ಮೆಪಂಚೆ ಖರೀದಿ ಮಾಡುತ್ತಾರೆ. ಸ್ಥಳದಲ್ಲಿಯೇ ಹಣ ನೀಡುತ್ತಾರೆ.
ಅಂಗಡಿಗಳು ಬರಲಿವೆ ಇನ್ನಷ್ಟು, ಬಹಳಷ್ಟು:
ಓಜಸ್ ಹೆಲ್ತ್ ಬೂಸ್ಟರ್ ಬರಲಿದೆ ಅಡಿಕೆಯಿಂದ ತಯಾರಿಸಿದ ಆರೋಗ್ಯಕರ ಪೇಯ ನೀವು ಟೇಸ್ಟ್ ನೋಡಿ ಖರೀದಿಸಬಹುದು.
ಕೆಮಿಕಲ್, ಕೃತಕ ಬಣ್ಣವಿಲ್ಲದ “ನ್ಯಾಚುರಲ್ ಗೋಕುಲ ಐಸ್‌ಕ್ರೀಮ್”
ಮನೆಯಲ್ಲಿ ಮಾಡಿದ ಚಕ್ಕುಲಿ, ಬಾಳೆಕಾಯಿ ಚಿಪ್ಸ್
ಕಲಬೆರಕೆಯಿಲ್ಲದ ಶುದ್ಧ ಜೇನುತುಪ್ಪ, ಹಪ್ಪಳ, ಖಾರಾ, ಕುರುಕಲು ತಿಂಡಿಗಳ ಅಪಾರ ಸಂಗ್ರಹ. ವಿಭಾ ಫುಡ್ ಅವರಿಂದ ಪೂರಿ, ಚಪಾತಿ, ಅಕ್ಕಿರೊಟ್ಟಿ, ಸ್ಟಾಲ್, ಸ್ನಾಕ್ಸ್ ಮಂಡಕ್ಕಿ,ಪೊಟೆಟೋ ಟ್ವಿಸ್ಟರ್, ಸ್ವೀಟ್ ಕಾರ್ನ
ಜಿಆರ್‌ಬಿ ಅವರ ಸಿಹಿ ತಿನಿಸುಗಳ ಉತ್ಪನ್ನಗಳು ಮಾರಾಟಕ್ಕೆ ಬರಲಿದೆ.
ಚಹಾ ಪುಡಿಯಲ್ಲಿ ವಿವಿಧ ಮಾದರಿಯ ಚಹಾ ಪುಡಿಗಳನ್ನು ಇಲ್ಲಿ ನೋಡಬಹುದು.
ಪುಸ್ತಕ, ಅಗರಬತ್ತಿ, ಗೋವಿನ ಉತ್ಪನ್ನಗಳು, ಖಾದಿ ಮನೆ.
ಪುಸ್ತಕದ ಅಂಗಡಿ, ನೈಸರ್ಗಿಕ ಅಗರಬತ್ತಿ, ತಾಮ್ರ ಗೌರ, ಗೋ ಸುರಕ್ಷಾ ಕವಚ ಸೇರಿದಂತೆ ಗೋವಿನ ಉತ್ಪನ್ನಗಳ ಅಂಗಡಿ, ಖಾದಿ ಮನೆ ಅವರ ಶರ್ಟ್, ಕುರ್ತಾ ಇನ್ನಿತರ ಬಟ್ಟೆಗಳು ಮರಾಟಕ್ಕೆ ಸಿಗಲಿವೆ
ಇಂಡಿಯಾ ಪೋಸ್ಟ್ ನಿಂದ ಮಾಹಿತಿ:
ಭಾರತೀಯ ಅಂಚೆ ಇಲಾಖೆ ತನ್ನ ಕಾರ್ಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಒಂದು ಕೌಂಟರ್ ತೆರೆಯಲಿದೆ. ಈ ಕೌಂಟರ್ನಲ್ಲಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ವಿಶೇಷ ಆಕರ್ಷಣೆ ಮಧ್ಯಾಹ್ನ 3 ಗಂಟೆಯಿಂದ:
ಹಳ್ಳಿ ಹಾಡು, ಮದುವೆ ಹಾಡು:
ಅನಂತ ಹೆಗಡೆ ಹಣಗಾರ ಅವರಿಂದ ಹಳ್ಳಿ ಹಾಡು ಮತ್ತು ಮದುವೆ ಹಾಡು. ಮರೆತುಹೋಗುತ್ತಿರುವ ಸಾಂಪ್ರದಾಯಿಕ ಹಾಡನ್ನು ಮತ್ತೊಮ್ಮೆ ಮೆಲಕು ಹಾಕುವ ಹೊಸ ಪ್ರಯತ್ನ
ಬರಲಿದ್ದಾರೆ ಸ್ಮಿತಾ ಹೆಗಡೆ:
ಸ್ಮಿತಾ ಹೆಗಡೆ ಇವರಿಂದ “ಸಾಂಪ್ರದಾಯಿಕತೆಗೆ ಕಲಾತ್ಮಕ ಮೆರಗು” ದೀಪದ ಅಲಂಕಾರವನ್ನು ವಿಭಿನ್ನವಾಗಿ ಮಾಡುವುದು ಹಾಗೂ ನೈಸರ್ಗಿಕವಾಗಿ ಪರಿಮಳಯುಕ್ತ ಏರ್ ಫ್ರೆಶನರ್ ತಯಾರಿ ಹೇಗೆ ಎಂಬ ಮಾಹಿತಿ ಮತ್ತು ಪ್ರದರ್ಶನ
ಮಾತುಕತೆ:
* ಅಮೋಘ ಇ ಮೋಟರ್ಸ ಸಂತೋಷ ಹೆಬ್ಬಾರ ಅವರಿಂದ ತೋಟ ಗದ್ದೆಗಳಲ್ಲಿ ಕರೆಂಟಿನಿಂದ ಚಲಿಸುವ ಇ ಕಾರ್ಟ ಬಗ್ಗೆ ಮಾಹಿತಿ
* ಈಸಿ ಲೈಫ್ ರಾಜೇಶ ಭಟ್ಟ ಅವರಿಂದ “ಆಧುನಿಕ ಯಂತ್ರೋಪಕರಣಗಳ ಮೂಲಕ ಸುಲಭ ಕೃಷಿ” ವಿಷಯದಲ್ಲಿ ಮಾತುಕತೆ
ಗ್ರಾಮೀಣ ಭಾಗದ ಇತಿಹಾಸದಲ್ಲಿಯೇ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಶಿರಸಿ ಸುತ್ತಮುತ್ತಲಿನ ಜನರು ಡಿಸೆಂಬರ್ 28, ಶನಿವಾರ “ ಒಂದು ತಾಸಿನ ಮಟ್ಟಿಗಾದರೂ ಹೆಗಡೆಕಟ್ಟಾ ಸೊಸೈಟಿ ಆವರಣಕ್ಕೆ ಆಗಮಿಸಬೇಕೆಂದು “ಹೆಗಡೆಕಟ್ಟಾ ಹಬ್ಬ” ಸಂಯೋಜಿಸಿರುವ ಹೆಗಡೆಕಟ್ಟಾ ಸೊಸೈಟಿ ಆಮಂತ್ರಿಸಿದೆ.
“ಅಯ್ಯೋ ಅವತ್ತು ಬೇರೆ ವಿಶೇಷ ಇದೆ” ನಿಮಗೆ ಮಿಸ್ ಆಗೋಗುತ್ತಾ ಕಾರ್ಯಕ್ರಮ? ಹಾಗಾದ್ರೆ ನೋಡಿ
ಫ್ರಿಡ್ಜ್, ವಾಷಿಂಗ್ ಮಷೀನ್, ಟಿವಿ, ಮಿಕ್ಸರ್, ಬಟ್ಟೆಗಳು, ಸ್ಟೀಲ್ ಪಾತ್ರೆ, ಕುಕ್ಕರ್ ವಿನಿಮಯ ಮತ್ತು ಹೊಸತು ಮಾರಾಟ ಭಾನುವಾರ ಹೊರತುಪಡಿಸಿ ಜನವರಿ 4 ರವರೆಗೆ ಮುಂದುವರೆಯಲಿದೆ. ಹೆಗಡೆಕಟ್ಟಾ ಸೊಸೈಟಿ ನೀಡುವ ರಿಯಾಯಿತಿ ಮತ್ತು ಆಫರ್ ಜನವರಿ 4ರವರೆಗೂ ಸಿಗುತ್ತದೆ.
ಸುದ್ದಿ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ಮತ್ತು ಸಂಬಂಧಿಗಳಿಗೆ “ಹೆಗಡೆಕಟ್ಟಾ ಹಬ್ಬ” ದ ಬಗ್ಗೆ ತಿಳಿಸಿ, ವಿಷಯ ಶೇರ್ ಮಾಡಿ.