ಸಿದ್ದಾಪುರ: ದೊಡ್ಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಯುವ ಸಹಕಾರಿ ಮುಂದಾಳು ವಿವೇಕ ಭಟ್ಟ ಗಡಿಹಿತ್ಲು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಜಯಾ ನಾರಾಯಣ ನಾಯ್ಕ ಆಯ್ಕೆಯಾಗಿದ್ದಾರೆ.
ಡಿ.14 ರಂದು ಸಂಸ್ಥೆಯ ನಿರ್ದೇಶಕ ಮಮಡಳಿಗೆ ನಡೆದ ಚುನಾವಣೆಯಲ್ಲಿ ಗಡಿಹಿತ್ಲು ನೇತೃತ್ವದ ತಂಡವು ಬಹುಮತದಿಂದ ಆಯ್ಕೆಯಾಗುವ ಮೂಲಕ ಸಂಸ್ಥೆಯ ಶೇರು ಸದಸ್ಯರ ವಿಶ್ವಾಸ ಗಳಿಸಿತ್ತು. ಈ ಹಿಂದೆ ಸಂಸ್ಥೆಯ ಅಧ್ಯಕ್ಷರಾಗಿ ಸುಬ್ರಾಯ ಭಟ್ಟ ಗಡಿಹಿತ್ಲು ಸಂಸ್ಥೆಯನ್ನು ಮುನ್ನಡೆಸಿದ್ದರು. ಇದೀಗ ಅವರ ಪುತ್ರ, ಕಾಂಗ್ರೆಸ್ ಧುರೀಣ ವಿವೇಕ ಭಟ್ಟ ಗಡಿಹಿತ್ಲು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.