ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಯಲ್ಲಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಶಿರಸಿ ತಾಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕು. ಇಂಚರಾ ಕೃಷ್ಣ ನಾಯ್ಕ, ಕು.ನವ್ಯಾ ಕೃಷ್ಣ ಮರಾಠಿ, ಕು. ಸಹನಾ ರಾಜೇಶ ನೇತ್ರೇಕರ್, ಕು.ಭಾವನಾ ನಾರಾಯಣ ಮರಾಠಿ, ಕು. ಆಲಿಯಾ ಮಹಮ್ಮದ ಇಸಾಕ್ ಕು.ಕಾಂಚನಾ ಗಜಾನನ ಮರಾಠಿ ನೃತ್ಯದಲ್ಲಿ ಮತ್ತು ಸುಮಧುರವಾಗಿ ಕು.ಐಶ್ವರ್ಯ ಸುಭಾಸ ಚನ್ನಯ್ಯ, ಕು.ಶೃಮೇಧಾ ಸುಭಾಸ ಚನ್ನಯ್ಯ, ಕು.ಶಾಹೀರಾಬಾನು ಮಹಮ್ಮದ ಶಾಕಿರ ಭಟ್ಕಳ, ಕು.ತನ್ಮಯಿ ಮಂಜುನಾಥ ಹೆಗಡೆ,ಕು. ನಯನ ಚಂದ್ರ ಮರಾಠಿ ಮತ್ತು ಕು. ಧನ್ಯಾ ನರಸಿಂಹ ಹೆಗಡೆ ಹಿನ್ನೆಲೆ ಹಾಡಿದ್ದರು.
ವಿದ್ಯಾ ಸಂಸ್ಥೆಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶಕರನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯ ಮಾನ್ಯ ಉಪನಿರ್ದೇಶಕರು, ತಾಲೂಕಿನ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಮತ್ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ವರ್ಗ, ಪ್ರಾಚಾರ್ಯರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕವೃಂದ ಅಭಿನಂದನೆ ಸಲ್ಲಿಸಿದ್ದಾರೆ.