ದಾಂಡೇಲಿ : ನಗರದ ಅತ್ಯುತ್ತಮ ಕರಾಟೆ ಶಿಕ್ಷಕರಾದ ಯಾಕುಬ್ ಶೇಖ ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ನೀಡುವ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕರಾಟೆ ಶಿಕ್ಷಕರಾಗಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ ಯಾಕುಬ್ ಶೇಖ ಅವರು ದಾಂಡೇಲಿ ಕರಾಟೆ ಕ್ಲಾಸಸ್ ಮತ್ತು ದಾಂಡೇಲಿ ಕರಾಟೆ ಕ್ಲಬ್ ಇದರ ಮುಖ್ಯ ಶಿಕ್ಷಕರಾಗಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಕಾರವಾರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯ ಸಂದರ್ಭದಲ್ಲಿ ಯಾಕುಬ್ ಶೇಖ ಸ್ವೀಕರಿಸಿದ್ದಾರೆ.
ನಗರದ ಲಯನ್ಸ್ ಕ್ಲಬ್ಬಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸುತ್ತಿರುವ ಯಾಕುಬ್ ಶೇಖ ಕರಾಟೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಯಾಕುಬ್ ಶೇಖ ಅವರಿಗೆ ನಗರದ ಗಣ್ಯರನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.