ಹೊನ್ನಾವರ : ತಾಲೂಕಿನ ಕೃಷಿ ಹುಟ್ಟುವಳಿ ಸಹಕಾರಿ ಮಾರಾಟ ಸಂಘ ನಿಯಮಿತ, ಹೊನ್ನಾವರ, ಇದರ ಆಡಳಿತ ಮಂಡಳಿಯಲ್ಲಿ ಖಾಲಿ ಇರುವ ‘ಅ’ ವರ್ಗದ ಮತಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಸಂಘದ ‘ಅ’ ವರ್ಗದ ಸದಸ್ಯರಾದ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಖರ್ವಾ, ಇದರ ಆಡಳಿತ ಮಂಡಳಿಯ ನಿರ್ದೇಶಕ ವಿಶ್ವನಾಥ ಸುಬ್ರಾಯ ಭಟ್ಟ ಇವರನ್ನು ಸಂಘದ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಿ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಟಿ.ಹೆಚ್.ಎಂ. ಕುಮಾರ್ ಆದೇಶಿಸಿದ್ದಾರೆ. ಪ್ರಸ್ತುತ ವಿಶ್ವನಾಥ ಭಟ್ಟ ಕೆ. ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕರಾಗಿ, ಹೊನ್ನಾವರ ಜೇನು ಸಾಕುವವರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.