ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ಕಲೆ, ಸಂಸ್ಕೃತಿ, ಸಾಹಿತ್ಯ, ಕೃಷಿ, ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಅಪಾರ ಸಾಧನೆಗೈದಿರುವ ನಾಡವ ಸಮಾಜದ ಶಿರಸಿ ತಾಲೂಕಿನ ಶ್ರೀ ವೆಂಕಟೇಶ್ವರ ಸಾಂಸ್ಕೃತಿಕ ಸಂಘ (ರಿ ) ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಪ್ರೊ. ರವಿ ನಾಯಕ, ಕಾರ್ಯದರ್ಶಿಯಾಗಿ ಮಂಜುನಾಥ್ ನಾಯಕ, ಸಂಘಟನಾ ಕಾರ್ಯದರ್ಶಿ ಪ್ರೊ. ನಾಗರಾಜ್ ಗಾಂವಕರ, ಖಜಾಂಚಿಯಾಗಿ ಸಾತ್ವಿಕ್ ನಾಯಕ, ಸಹ ಕಾರ್ಯದರ್ಶಿ ದೇವಿದಾಸ್ ನಾಯಕ,ಸದಸ್ಯರುಗಳಾಗಿ ಚಂದ್ರಶೇಖರ ನಾಯಕ, ವಸಂತ ಕೆ ನಾಯಕ, ಸತೀಶ್ ನಾಯಕ, ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ನಾಗವೇಣಿ ನಾಯಕ, ಶ್ರೀಮತಿ ರೋಹಿಣಿ ನಾಯಕ, ಶ್ರೀಮತಿ ಶ್ವೇತಾ H. S., ಗೌರವ ಸಲಹೆಗಾರರಾಗಿ ಕೃಷ್ಣಾನಂದ ನಾಯಕ, ಶಾಂತಾ ನಾಯಕ ಆಯ್ಕೆಯಾಗಿದ್ದಾರೆ. ಈ ಆಡಳಿತ ಮಂಡಳಿಯ ಅವಧಿಯಲ್ಲಿ ಸಂಘವು ವಿನೂತನ ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸಿದೆ.