ಶಿರಸಿ: ಅಂಕೋಲಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವದಲ್ಲಿ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಚರಿತ್ರಾ ಹೆಗಡೆ ದ್ವಿತೀಯ, ಶಾಸ್ತ್ರೀಯ ವಾದ್ಯ ಆತ್ಮಾನಂದ್ ಶೇಟ್ ದ್ವಿತೀಯ, ಕಾರ್ಟೂನಿಂಗ್ ವೀಣಾ ಪಿ. ಓಣಿಕೇರಿ ತೃತೀಯ ಸ್ಥಾನ ಪಡೆದಿದ್ದಾರೆ.ಹಾಗೂ ಗುಂಪು ಸ್ಪರ್ಧೆಯಲ್ಲಿ ಫೋಕ್ ಆರ್ಕೆಸ್ಟ್ರಾ ಪ್ರಥಮ, ಕ್ವಿಜ್ ದ್ವಿತೀಯ, ಜನಪದ ನೃತ್ಯ ತೃತೀಯ, ಇನ್ಸ್ಟಾಲೇಷನ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಎಂಇಎಸ್ ಅಧ್ಯಕ್ಷ ಜಿ. ಎಂ. ಹೆಗಡೆ ಮುಳಖಂಡ, ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್. ಕೆ. ಭಾಗವತ್, ಸಂಸ್ಥೆಯ ಪದಾಧಿಕಾರಿಗಳು, ಪ್ರಾಚಾರ್ಯ ಪ್ರೊ.ಜಿ.ಟಿ. ಭಟ್, ಅಧ್ಯಾಪಕ ವರ್ಗ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.