Slide
Slide
Slide
previous arrow
next arrow

ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲಿ: ರವೀಂದ್ರ ನಾಯ್ಕ

300x250 AD

ಭಟ್ಕಳ: ಅರಣ್ಯವಾಸಿಗಳ ಅರಣ್ಯಭೂಮಿ ಹಕ್ಕಿಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ನಿಲುವನ್ನು ಪ್ರಕಟಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
     
ಅವರು ಭಟ್ಕಳ ತಾಲೂಕಿನ ಸಿಟಿ ಹಾಲ್ ಸಂಭಾಗಣದಲ್ಲಿ ಅ.21, ಸೋಮವಾರದಂದು ಭಟ್ಕಳ ತಾಲೂಕಿನ ಅರಣ್ಯ  ಅತಿಕ್ರಮಣದಾರರ ಬೃಹತ್ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.

ಪರಿಸರವಾದಿ ಸಂಘಟನೆಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಒತ್ತುವರಿ ಪ್ರದೇಶದಲ್ಲಿ ಅರಣ್ಯೀಕರಣ ಮಾಡಬೇಕೆಂಬ ವಿಚಾರಣೆಯಲ್ಲಿ ಸರ್ಕಾರವು ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸುವದು ಮಹತ್ವದಾಗಿದ್ದು, ಇರುತ್ತದೆ ಇಲ್ಲದಿದ್ದಲ್ಲಿ  ಅರಣ್ಯವಾಸಿಗಳ ಅತಂತ್ರವಾಗುವರು ಎಂದು ಅವರು ಹೇಳಿದರು.

ಸಭೆಯಲ್ಲಿ ಪ್ರಮುಖರಾದ ದೇವರಾಜ ಗೊಂಡ, ಚಂದ್ರು ನಾಯ್ಕ, ಪಾಂಡುರಂಗ ನಾಯ್ಕ, ರತ್ನ ಬೆಳಕೆ, ಶ್ರೀಧರ ನಾಯ್ಕ ಹಾಡುವಳ್ಳಿ, ಖುಯುಮ ಸಾಬ್ ಮುಂತಾದವರು ಉಪಸ್ಥಿತರಿದ್ದರು. ಜಿಪಿಎಸ್ ಪುನರ್ ಪರಿಶೀಲನಾ ಮೇಲ್ಮನವಿ ಸ್ವೀಕೃತಿ ಪ್ರತಿಯನ್ನು ಅರಣ್ಯವಾಸಿಗಳಿಗೆ ಹಿರಿಯರಾದ ಕಜಿಂ ಇನಾಯುತ್ ಶಾಬಂದ್ರಿ ಅರಣ್ಯವಾಸಿಗಳಿಗೆ ವಿತರಿಸಿದರು.

300x250 AD

ಕಾನೂನು ಹೋರಾಟ:
   ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಪರವಾಗಿ ವಾದ ಮಂಡಿಸುತ್ತಿದ್ದು, ಅರಣ್ಯವಾಸಿಗಳ ಪರ ಸ್ಪಷ್ಟ ಆದೇಶ ಬರಬಹುದೆಂಬ ನಿರೀಕ್ಷೆಯಲ್ಲಿ ಹೋರಾಟಗಾರರ ವೇದಿಕೆ ಇದೆ ಎಂಬ ಆಶಯವನ್ನು ಅಧ್ಯಕ್ಷ ರವೀಂದ್ರ ನಾಯ್ಕ ವ್ಯಕ್ತಪಡಿಸಿದ್ದರು.

Share This
300x250 AD
300x250 AD
300x250 AD
Back to top