ಶಿರಸಿ: ಅರಣ್ಯ ಹಕ್ಕು ಪಡೆಯುವಲ್ಲಿ ಅರಣ್ಯ ಹಕ್ಕು ಕಾನೂನು ಕೊನೆಯ ಕಾನೂನಾಗಿದ್ದು, ಈ ಕಾನೂನಿನಲ್ಲಿ ಭೂಮಿ ಹಕ್ಕಿನಿಂದ ವಂಚಿತರಾಗಿದ್ದಲ್ಲಿ, ಅಂತಹ ಅರಣ್ಯವಾಸಿಗಳು ನಿರಾಶ್ರಿತರಾಗುವರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮಪಂಚಾಯತಿ ಸಂಭಾಗಣದಲ್ಲಿ ನವೆಂಬರ್ ೭ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗಾಗಿ ಹಂಗಾಮಿ ಲಾಗಣಿದಾರರಿಗೆ ಖಾಯಂ ಲಾಗಣಿತೇಯಿಂದ ಭೂಮಿ ಹಕ್ಕು ೧೯೭೮ ನೇ ಇಸ್ವಿ ಪೂರ್ವ ಅತಿಕ್ರಮಣದಾರರಿಗೆ ಅರಣ್ಯ ಭೂಮಿ ಮಂಜೂರಿಗೆ ಕಾನೂನಿನಲ್ಲಿ ಅವಕಾಶದ ನಂತರ ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕಿಗೆ ಪಡೆಯಲು ಕೊನೆಯ ಕಾನೂನಾಗಿದೆ. ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿದ್ದ ರೀತಿಯಲ್ಲಿ ಕಾರ್ಯ ಪ್ರರ್ವತ್ತರಾಗಿರಿ ಎಂದು ಅವರು ಹೇಳಿದರು.
ಸಭೆಯಲ್ಲಿ ವೆಂಕಟ ಬೈಂದೂರು ಸ್ವಾಗತ ಪ್ರಸ್ತಾವನೆ ಮಾಡಿದ್ದರು. ಆನಂದ ಗೌಡ, ಮಾತನಾಡಿದ್ದರು. ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಶ್ರೀಮತಿ ಕಾರ್ಮಲಿನ ಉಪಸ್ಥಿತರಿದ್ದರು.
ಹೋರಾಟ ಕೈಬಿಡಬೇಡಿ:
ನಿರಂತ ಹೋರಾಟ ಯಶಸ್ಸು ಸಿಗಲು ವಿಳಂಬವಾಗಿದೆ ಹೋರಾಟ ನಿಲ್ಲಿಸದ್ದೀರಿ, ಹೋರಾಟ ನಿರಂತವಾಗಿರಲಿ ಎಂದು ಹಿರಿಯ ಹೋರಾಟಗಾರ್ತಿ ಸರೋಜನಿ ಭಟ್ಟ್ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.