ವರದಿ: ಲೋಕೇಶ್ ನಾಯ್ಕ್ ಭಟ್ಕಳ
ಭಟ್ಕಳ: ಮರಳು ಲಭ್ಯತೆಯ ಸಮಸ್ಯೆ ತೀವ್ರತೆಯನ್ನು ಪಡೆದುಕೊಂಡಿದೆ. ಜಿಲ್ಲಾಡಳಿತ ಜನಪ್ರತಿನಿದಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವೆಂದಲ್ಲಿ ಎಂಜಿನಿಯರ್, ಗುತ್ತಿಗೆಗಾರರು, ಕಟ್ಟಡ ಕಾರ್ಮಿಕರ ಅಸೋಸಿಯೇಷನ್ ಜೊತೆಗೂಡಿ ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ನಾಯ್ಕ್ ಹೇಳಿದರು.
ಅವರು ಅ.10, ಗುರುವಾರದಂದು ಇಂಜಿನಿಯರ್ ಹಾಗೂ ಅರ್ಕಿಟೆಕ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗೇಂದ್ರ ನಾಯ್ಕ್ ಭಟ್ಕಳದ ಹೋಟೆಲ್ ಅಮೀನಾ ಪ್ಯಾಲೇಸ್ ಸಭಾಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಭಟ್ಕಳ ತಾಲ್ಲೂಕಿನಲ್ಲಿ ಈ ಹಿಂದೆಯೂ ಕೂಡ ಮರಳಿನ ಸಮಸ್ಯೆ ಇತ್ತು. ಪರ ಜಿಲ್ಲೆಯಿಂದ ಮರಳು ಭಟ್ಕಳಕ್ಕೆ ಬರುತ್ತಿತ್ತು. ಆದರೆ ಕಳೆದ 2-3 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಶರಾವತಿ ನದಿಯ ದಿಬ್ಬಗಳಿಂದ ಸರಬರಾಜಿಗೆ ಸರಕಾರದ ಪರವಾನಿಗೆ ಪಡೆದವರಿಂದ ಮರಳು ಪಡೆಯುತ್ತಿದ್ದೆವು.ಆದರೆ ಈಗ ಮರಳಿನ ಲಭ್ಯತೆಯ ಸಮಸ್ಯೆ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.ಭಟ್ಕಳ ನಗರಭಾಗಗಳಲ್ಲಿ, ಗ್ರಾಮಾಂತರ ಭಾಗಗಳಲ್ಲಿ,ಚರಂಡಿ ಕಟ್ಟಡ, ಕಾಂಕ್ರೀಟ್ ರಸ್ತೆ, ದುರಸ್ಥಿ ಕಾಮಗಾರಿಗಳು ನಡೆಯದೆ, ಸ್ತಬ್ದವಾಗಿದೆ. ಕಟ್ಟಡ, ರಸ್ತೆ ಚರಂಡಿಗಳ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದಲ್ಲದೆ ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬ ದಿನಗೂಲಿ ಕೆಲಸಗಾರರು, ಕಟ್ಟಡ ಕಾರ್ಮಿಕರು,ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಬಡವರ ಮನೆಗಳು ದೇವಾಲಯಗಳ ನಿರ್ಮಾಣದ ಹಂತ ಅರ್ಧದಲ್ಲೇ ನಿಂತಿದ್ದು ಕಾಮಗಾರಿ ಪಡೆದ ಎಂಜಿನಿಯರ್, ಗುತ್ತಿಗೆದಾರರು ಆರ್ಕಿಟೆಕ್ರವರಿಗೆ ಆರ್ಥಿಕ ಅಸ್ತಿರತೆ ಉಂಟಾಗಿದೆ.ಈ ಎಲ್ಲ ಅಂಶಗಳನ್ನು ಮನಗೊಂಡು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಭಾಗದಿಂದ ಮರಳು ಮಾತ್ತ್ರ ಅಲ್ಲದೆ ಪಕ್ಕದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕುಂದಾಪುರ ಭಾಗದಿಂದಲಲೂ ಮರಳನ್ನು ಭಟ್ಕಳ ತಾಲೂಕಿಗೆ ಸರಬುರಾಜು ಮಾಡುವ ವ್ಯವಸ್ಥೆ ಕಲ್ಪಿಸುವಂತೆ, ಮತ್ತು ಈ ವಿಚಾರವಾಗಿ ಕ್ಷೇತ್ರದ ಶಾಸಕರು, ಸಚಿವರು ಜಿಲ್ಲಾಡಳಿತ ಜನಪ್ರತಿನಿದಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು. ವಿಳಂಬದ ಹಂತಕ್ಕೇರಿದರೆ ತಾಲ್ಲೂಕಿನ ಎಂಜಿನಿಯರ್ ಅಸೋಸಿಯೇಷನ್, ಆರ್ಕೆಟೆಕ್, ಗುತ್ತಿಗೆದಾರರ ಸಂಘಟನೆ, ಕಾರ್ಮಿಕರ ಸಂಘಟನೆ, ಆಸಂಗಟಿ ತ ಕಾರ್ಮಿಕ ಸಂಘಟನೇ ಗಳಿಂದ ಬೃಹತ್ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿರಾಜುದ್ದಿನ್ ಮವ್ವನ್ ರಶೀದ್, ಕಾರ್ಯದರ್ಶಿ ಸುರೇಶ ಪೂಜಾರಿ,ಐಮಾನ್ ದಾತಾ,ಉಮರ್ ಮಿಸ್ಬಾ, ಮೊಹಮ್ಮದ್ ಸುರೇಮ್ ಮತ್ತಿತರರು ಉಪಸ್ಥಿತರಿದ್ದರು.