ಶಿರಸಿ: ಶಿರಸಿಯ ಕೆಂಡಮಹಾಸತಿ ದೇವಾಲಯದಲ್ಲಿ ಸೃಷ್ಟಿಕಲಾಪದ ಸದಸ್ಯೆಯರಿಂದ “ಶ್ರೀ ದೇವಿ ಮಹಾತ್ಮೆ ” ಎನ್ನುವ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಮಹಾನವರಾತ್ರಿಯ ನಿಮಿತ್ತ ಆಯೋಜಿಸಲಾಗಿದ್ದ ತಾಳಮದ್ದಲೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕುಮಾರಿ ಶ್ರೀರಕ್ಷಾ ಹೆಗಡೆ, ಕುಮಾರಿ ಅಭಿಜ್ಞಾ ಹೆಗಡೆ ಪಾಲ್ಗೊಂಡಿದ್ದರು. ಮದ್ದಲೆಯಲ್ಲಿ ಎನ್.ಜಿ. ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ರಘುಪತಿ ಹೆಗಡೆ ಹುಡೇಹದ್ದ ಪಾಲ್ಗೊಂಡಿದ್ದರು.
ಮುಮ್ಮೇಳದಲ್ಲಿ ಇಂದ್ರನಾಗಿ ಡಾ.ವಿಜಯನಳಿನಿ, ಶುಂಭಾಸುರನಾಗಿ ನಿರ್ಮಲಾ ಹೆಗಡೆ ಗೋಳಿಕೊಪ್ಪ, ದೇವಿಯಾಗಿ ಭವಾನಿ ಭಟ್ಟ, ಚಂಡಾಸುರನಾಗಿ ಶೈಲಜಾ ಗೊರನ್ಮನೆ, ರಕ್ತಬೀಜಾಕ್ಷನಾಗಿ ರೇಖಾ ಹೆಗಡೆ ನಾಣೀಕಟ್ಟಾ, ಮುಂಡಾಸುರ,ಸುಗ್ರೀವ ಪಾತ್ರಗಳಲ್ಲಿ ಸುಬ್ರಾಯ ಹೆಗಡೆ ಕೆರೆಕೊಪ್ಪ ಪಾಲ್ಗೊಂಡಿದ್ದರು. ಸುಬ್ರಾಯ ಹೆಗಡೆ ಕೆರೆಕೊಪ್ಪ ‘ಶ್ರೀ ದೇವಿಮಹಾತ್ಮೆ’ ತಾಳಮದ್ದಳೆಗೆ ಮಾರ್ಗದರ್ಶನ ನೀಡಿದ್ದರು.