Slide
Slide
Slide
previous arrow
next arrow

ಅ.13ರಂದು ನೀರ್ನಳ್ಳಿಯಲ್ಲಿ ಯಕ್ಷರಾತ್ರಿ

300x250 AD

ಶಿರಸಿ : ತಾಲೂಕಿನ ನೀರ್ನಳ್ಳಿಯ ಹೈಸ್ಕೂಲ್ ಆವಾರದಲ್ಲಿ ಭಾನುವಾರ ಅ.13 ರಂದು 6 ಗಂಟೆಯಿಂದ ಯಕ್ಷರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ನಡೆಯುವ ಯಕ್ಷಗಾನದಲ್ಲಿ ‘ಮೃತ ಸಂಜೀವಿನಿ’, ಮತ್ತು ‘ಮಾಯಾ ಕನಕಾಂಗಿ’ ಎಂಬ ಹವ್ಯಕ ಭಾಷೆಯಲ್ಲಿ ಯಕ್ಷಗಾನ ವಿಮರ್ಶೆಗಾಗಿರದೆ ಮನೋರಂಜನೆಗಾಗಿ ಇದ್ದು ನಂತರದಲ್ಲಿ ‘ವೀರ ವಿರೋಚನ’ ಸೇರಿದಂತೆ ಮೂರು ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ.

300x250 AD

ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರ್, ಪ್ರಸನ್ನ ಭಟ್ ಬಾಳ್ಕಲ್ ಭಾಗವಹಿಸುತ್ತಿದ್ದು , ಮದ್ದಳೆ ಚಂಡೇವಾದನದಲ್ಲಿ ಸುನಿಲ್ ಭಂಡಾರಿ, ರಾಘವೇಂದ್ರ ಹೆಗಡೆ, ಗಣೇಶ್ ಗಾಂವ್ಕರ್, ಗಜಾನನ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಮುಮ್ಮೇಳದ ಪಾತ್ರಧಾರಿಗಳಾಗಿ ಖ್ಯಾತ ನಾಮ ಕಲಾವಿದರು ಭಾಗವಹಿಸಲಿದ್ದಾರೆ.
ಪ್ರಸಂಗ ನಡೆಯುತ್ತಿರುವಾಗ ಮಳೆ ಬಂದರೂ ಅನುಕೂಲಕರ ವ್ಯವಸ್ಥೆಗೊಳಿಸಲಾಗುತ್ತಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕೆಂದು ಸಂಕಟಕರಾದ ವಿನಾಯಕ್ ಭಾಗವತ್ , ಗಣೇಶ್ ಹೆಗಡೆ ತಿಳಿಸಿದ್ದು ಇದು ಐದನೇ ವರ್ಷದ ಸಂಘಟನೆಯಾಗಿದೆ.

Share This
300x250 AD
300x250 AD
300x250 AD
Back to top