ಶಿರಸಿ: ಸಂಘಟನಾತ್ಮಕ ಪ್ರಯತ್ನದಿಂದ ಕಾರ್ಯ ಸುಗಮವಾಗುತ್ತದೆ ಎಂದು ವಲಯಾಧ್ಯಕ್ಷ ಶಂಕರ ವಿ. ಹೆಗಡೆ ಬದ್ರನ್ ಹೇಳಿದ್ದಾರೆ. ಅವರು ಶ್ರೀ ರಾಮಚಂದ್ರಾಪುರ ಮಠದ ಅಂಬಾಗಿರಿ ವಲಯದ ಆಶ್ರಯದಲ್ಲಿ ಸಂಘಟಿಸಲಾದ ವಲಯೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಲಯೋತ್ಸವ ಒಬ್ಬರಿಂದ ನಡೆಯುವುದಿಲ್ಲ, ಇದು ಎಲ್ಲರ ಸಹಕಾರ ಹಾಗೂ ತೊಡಗಿಸಿಕೊಳ್ಳುವದರಿಂದ ಯಶಸ್ವಿಯಾಗುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ದೇವಸ್ಥಾನ ಸಮೀತಿಯ ಅಧ್ಯಕ್ಷ ವಿ.ಎಮ್.ಹೆಗಡೆ ಆಲ್ಮನೆ, ವಲಯದ ಉಪಾಧ್ಯಕ್ಷೆ ಸಾವಿತ್ರಿ ಹೆಗಡೆ, ಪ್ರಧಾನ ಕಾರ್ಯದರ್ಶಿ ಸುರೇಶ ಹೆಗಡೆ, ಪದಾಧಿಕಾರಿ ವಿ.ಎಸ್. ಭಟ್ಟ ,ಮಂಡಲದ ಮಾತೃ ಪ್ರಧಾನ ಇಂದಿರಾ ಶಾನಭಾಗ್ ಹಾಗೂ ಇತರರು ಉಪಸ್ಥತರಿದ್ದರು.
ಕ್ರೀಡೆ, ಸಾಂಸ್ಕೃತಿಕ, ಕಲೆ, ಯೋಗ, ಹಳೆಯ ಸಾಂಪ್ರದಾಯಿಕ ಹಾಡು, ರಂಗೋಲಿ ಮುಂತಾದ ವರ್ಗಗಳಲ್ಲಿ ಕಿರಿಯರಿಗೆ ಹಾಗೂ ಹಿರಿಯರಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಹಲವರು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಸಮಾರೋಪ ಹಾಗೂ ಬಹುಮಾನ ವಿತರಣೆ:
ಸಂಜೆ ನಡೆದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಬರಹಗಾರ, ದೇವಸ್ಥಾನ ಸಮೀತಿಯ ದಿಗ್ದರ್ಶಕ ಎಲ್.ಆರ್.ಭಟ್ಟ ಅವರು ಮಾತನಾಡಿ ಜನರು ಒಳ್ಳೆಯವರನ್ನು ಗುರುತಿಸುತ್ತದೆ. ಅದಕ್ಜೆ ಯಾರ ಶಿಫಾರಸು ಬೇಡ. ಜನರು ಗೌರವದಿಂದ ಪ್ರೀತಿಯಿಂದ ಕಾಣುವ ಪ್ರಶಸ್ತಿಯೇ ಶ್ರೇಷ್ಟವಾದುದು. ನಾವಿಂದ ಉತ್ತಮ ಪರಿಸರ, ಸಮಾಜವನ್ನು ಉನ್ನತಿಗೆ ಏರಿಸುವ ಕೆಲಸ ಮಾಡಬೇಕು. ಯಾಕೆಂದರೆ ನವನಾಗರಿಕರಾಗುವ ಯುವಕರಿಗೆ ಆಧ್ಯಾತ್ಮದ ಸನ್ಮಾರ್ಗವನ್ನು ತೋರಿಸಬೇಕು. ಇದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ವಿ.ಎಮ್.ಹೆಗಡೆ, ಆಲ್ಮನೆ ನವನಿರ್ಮಾಣ ಸಮೀತಿ ಅಧ್ಯಕ್ಷ ಬಿ.ಕೆ.ಹೆಗಡೆ ಕೆಶಿನ್ಮನೆ, ಸಮಾರಂಭದ ಅಧ್ಯಕ್ಷತೆಯನ್ನು ಶಂಕರ ವಿ.ಹೆಗಡೆ ಬದ್ರನ್ ವಹಿಸಿದ್ದರು.
ಸಾಂಸ್ಕೃತಿಕ ಸಮೀತಿಯ ಜಾನಕಿಭಟ್ಟ ಸ್ವಾಗತಿಸಿದರು. ಡಿ.ಎಸ್.ಹೆಗಡೆ ಮುರೂರು ಕಾರ್ಯಕ್ರಮ ನಿರ್ವಹಿಸಿದರು. ಚೈತಾಲಿ ಉಪಾಧ್ಯಾಯ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ , ಬಹುಮಾನ ವಿಜೇತರ ಹೆಸರನ್ನು ಪ್ರಕಟಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನಗಳ ಪ್ರಾಯೋಜಕತ್ವವನ್ನು ವಿನಯ್ ಭಟ್ಟ ವಹಿಸಿದ್ದರು. ವಲಯದ ಪ್ರಧಾನ ಕಾರ್ಯದರ್ಶಿ ಸುರೇಶ ಹೆಗಡೆ ವಂದಿಸಿದರು.