ಸಿದ್ದಾಪುರ: ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ತಾಲೂಕ ಆಸ್ಪತ್ರೆ ಸಿದ್ದಾಪುರ, ಗ್ರೀನ್ ಕೇರ್ (ರಿ.) ಶಿರಸಿ ಮತ್ತು ಸಂಕಲ್ಪ ಟ್ರಸ್ಟ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಅ.4ರಂದು ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಸಿದ್ದಾಪುರ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರಾದ ಡಾ. ಪ್ರಕಾಶ್ ಪುರಾಣಿಕ್, ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಎ.ಜಿ.ವಸ್ತ್ರದ ಮತ್ತು ಎಲ್ಲಾ ಗಣ್ಯರು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ. ಪ್ರಕಾಶ್ ಪುರಾಣಿಕ್ ಅವರು ಮಾತನಾಡಿ ಸಿದ್ದಾಪುರ ತಾಲೂಕಿನಲ್ಲಿ ತುಂಬಾ ಫಲಾನುಭವಿಗಳು ಇದ್ದಾರೆ. ಇಂಥ ಶಿಬಿರಗಳು ಈ ತಾಲೂಕಿನಲ್ಲಿ ಹೆಚ್ಚು ಹೆಚ್ಚು ನಡೆಸಬೇಕೆಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಾಪುರ ತಾಲೂಕು ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಗುರುದತ್ ಮಂಗಳೂರು, ಸಂಕಲ್ಪ ಟ್ರಸ್ಟ್ ಶಿರಸಿಯ ಅಧ್ಯಕ್ಷರಾದ ಕುಮಾರ್ ಪಟಗಾರ, ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿಗಳಾದ ಗಿರೀಶ್ ದಾರೇಶ್ವರ್, ಸಿದ್ದಾಪುರ ತಾಲೂಕಿನ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿಗಳಾದ ಸುರೇಶ್ ತಲ್ವಾರ್ ಉಪಸ್ಥಿತರಿದ್ದರು. ಗ್ರೀನ್ ಕೇರ್ (ರಿ.) ಶಿರಸಿ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ ತೋನ್ಸೆ ಮಾತನಾಡಿ ಆರೋಗ್ಯ ಸಂಬಂಧಿ ಯಾವುದೇ ಶಿಬಿರಗಳಲ್ಲಿ ನಾವು ಕೈಜೋಡಿಸುವುದಾಗಿ ತಿಳಿಸಿದರು. ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿ ಗಿರೀಶ್ ಧಾರೇಶ್ವರ ಮತ್ತು ಸಿದ್ದಾಪುರ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಗುರುದತ್ ಮಂಗಳೂರು ಅವರು ಕಣ್ಣಿನ ಆರೋಗ್ಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜೆ.ಕೆ. ಎಂಟರ್ಪ್ರೈಸಸ್ ವ್ಯವಸ್ಥಾಪಕರಾದ ಮಹಾಂತೇಶ್ ಪ್ರಭು, ಗ್ರೀನ್ ಕೇರ್ ಸಂಸ್ಥೆಯ ಶ್ರೀಮತಿ ಅಪ್ಸಾನಾ, ಸಂಕಲ್ಪ ಟ್ರಸ್ಟ್ ನ ಶ್ರೀಲಕ್ಷ್ಮಿ, ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ 292 ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ 154 ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿ ಶಸ್ತ್ರಚಿಕಿತ್ಸೆಗಾಗಿ ರೋಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.