Slide
Slide
Slide
previous arrow
next arrow

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

300x250 AD

ಭಟ್ಕಳ: ತಾಲೂಕಿನ ಬಂದರ ರಸ್ತೆಯ ಮುಗ್ದುಂ ಕಾಲೋನಿಯ ಸಮೀಪ ಅಪರಿಚಿತ ಅಸ್ಥಿ ಪಂಜರ ರೂಪದಲ್ಲಿ ಮೃತ ದೇಹವೊಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮುಗ್ದುಂ ಕಾಲೋನಿ ವ್ಯಕ್ತಿಯೊರ್ವರು ಹಾರೆಯ ಹಿಡಿಗೋಲಿಗಾಗಿ ಕಟ್ಟಿಗೆ ಹುಡುಕುತ್ತಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೂ ಸುಮಾರ ತಿಂಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನೆಲದಿಂದ ಸುಮಾರು 10ಅಡಿ ಎತ್ತರದಲ್ಲಿ ನೈಲಾನ್ ಹಗ್ಗದಿಂದ ಶವವು ಮರಕ್ಕೆ ಬಿಗಿದ ಸ್ಥಿತಿಯಲ್ಲಿ ಇದ್ದು, ದೇಹದಿಂದ ರುಂಡ ಬೆರ್ಪಟ್ಟು ಕೆಳಗೆ ಬಿದ್ದಿದೆ. ಶವದ ಅಡಿಯಲ್ಲಿ ಚಪ್ಪಲಿ ಪತ್ತೆಯಾಗಿದ್ದು ಪುರುಷನ ಶವ ಎಂದು ಗುರುತಿಸಲಾಗಿದೆ. . ಮುಖ್ಯ ರಸ್ತೆಯ ಬಳಿಯಲ್ಲಿ ಘಟನೆ ನಡೆದರು ಬೆಳಕಿಗೆ ಬರದಿರುವದು ಅಚ್ಚರಿ ಮೂಡಿಸಿದೆ. ಘಟನೆ ಬೆಳಕಿಗೆ ಬರುತ್ತಿರುವಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಜನರು ಜಮಾವಣೆಗೊಂಡಿದ್ದು ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ತೆರಳಿ ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top