Slide
Slide
Slide
previous arrow
next arrow

ಅ.8ರಂದು ದಾಂಡೇಲಿಯಲ್ಲಿ ಬೃಹತ್ ಉದ್ಯೋಗ ಮೇಳ

300x250 AD

ದಾಂಡೇಲಿ : ನಗರದ ಸಾಪ್ಟೆಕ್ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಇದೇ ಬರುವ ಅ.8ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ವರೆಗೆ ರೋಟರಿ ಶಾಲೆಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ಬಿನ ವಿಭಾಗಿಯ ಅಧ್ಯಕ್ಷರು ಹಾಗೂ ಸಾಪ್ಟೆಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳವರು ಹೇಳಿದರು.

ಅವರು ಶನಿವಾರ ನಗರದಲ್ಲಿ ಉದ್ಯೋಗ ಮೇಳದ ಕುರಿತಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 7ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣವನ್ನು ಪಡೆದು ನಿರುದ್ಯೋಗಿಗಳಾಗಿರುವ ಯುವ ಜನತೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಉದ್ಯೋಗ ಮೇಳದಲ್ಲಿ ಬಾಷ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಈ ಬಗ್ಗೆ ಅಕ್ಟೋಬರ್ 06 ರಂದು ಸಂದರ್ಶನದ ಪೂರ್ವಸಿದ್ಧತೆಯ ಕುರಿತಂತೆ ಸಾಪ್ಟೆಕ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಾಹಿತಿಯನ್ನು ನೀಡಲಾಗುವುದು. ನಿರುದ್ಯೋಗಿ ಯುವ ಜನತೆ ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸಾಪ್ಟೆಕ್ ಶಿಕ್ಷಣ ಸಂಸ್ಥೆಯಲ್ಲಿ ಹೆಸರನ್ನು ನೋಂದಾಯಿಸುವಂತೆ ಕೋರಿದರು.

300x250 AD

ದಾಂಡೇಲಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ, ಲಯನ್ಸ್ ಕ್ಲಬ್ಬಿನ ಹಿರಿಯರಾದ ಯು.ಎಸ್. ಪಾಟೀಲ್, ರೋಟರಿ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಅಶುತೋಷ್ ಕುಮಾರ್ ರಾಯ್, ಈ ನಾಡು ಸಂಘಟನೆಯ ಜಿಲ್ಲಾಧ್ಯಕ್ಷರಾದ ರಿಯಾಜ್ ಬಾಬು ಸೈಯದ್, ರೋಟರಿ ಕ್ಲಬ್ಬಿನ ಹಿರಿಯರಾದ ಎಸ್.ಜಿ. ಬಿರಾದಾರ ಅವರು ಮಾತನಾಡಿ ಉದ್ಯೋಗ‌ ಮೇಳ ಅತ್ಯುತ್ತಮವಾದ ಕಾರ್ಯಕ್ರಮವಾಗಿದ್ದು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಈ ಮೇಳದಲ್ಲಿ ಭಾಗವಹಿಸುವಂತೆ ಕೋರಿದರು.

Share This
300x250 AD
300x250 AD
300x250 AD
Back to top