Slide
Slide
Slide
previous arrow
next arrow

ವಿಶ್ವ ಛಾಯಾಗ್ರಹಣ ದಿನ: ಅಗತ್ಯ ಪರಿಕರ ವಿತರಣೆ

300x250 AD

ಭಟ್ಕಳ: ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ವಿವಿಧ ಸಂಸ್ಥೆಗಳಿಗೆ ನಿತ್ಯ ಉಪಯೋಗಕ್ಕೆ ಬರುವ ವಸ್ತುಗಳನ್ನು ನೀಡುವ ಮೂಲಕ ವಿಶ್ವ ಛಾಯಾಗ್ರಹಣದ ದಿನವನ್ನು ತಾಲೂಕಿನ ಉತ್ತರಕೊಪ್ಪದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.

ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣ ಶ್ಯಾನಭಾಗ ಇವರ ನೇತೃತ್ವದಲ್ಲಿ ಶುಕ್ರವಾರ ಕಾರ್ಯಕ್ರಮ ನಡೆಯಿತು. ಮೊದಲು ಹೊನ್ನೇಗದ್ದೆ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳಿ ಕ್ರೀಡಾ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದರು. ಬಳಿಕ ಉತ್ತರ ಕೊಪ್ಪದಲ್ಲಿ ಇರುವ ವನವಾಸಿ ಕಲ್ಯಾಣ ಸಂಸ್ಥೆಗೆ ಕುರ್ಚಿ, ಊಟದ ಟೇಬಲ್, ಮಿಕ್ಸಿ ಎಲ್‌ಇಡಿ ಬಲ್ಪ್‌ಗಳನ್ನು ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣ ಆಶ್ರಮದ ಸಂಚಾಲಕ ರಾಮಚಂದ್ರ ಜಿ.ಅವರು ಮಾತನಾಡಿ ಛಾಯಾಗ್ರಾಹಕ ವೃತ್ತಿಯ ಜೊತೆಗೆ ಕಳೆದ ೧೩ ವರ್ಷಗಳಿಂದ ಪ್ರತಿವರ್ಷ ಛಾಯಾಗ್ರಹಣದ ದಿನ ಬೇರೆ ಬೇರೆ ಸಂಸ್ಥೆಗಳಿಗೆ ವಸ್ತುಗಳ ರೂಪದಲ್ಲಿ ದೇಣಿಗೆ ನೀಡುತ್ತಿರುವುದು ಶ್ಲಾಘನೀಯ. ಈ ಮೂಲಕ ತಾವು ಬೆಳೆಯುವುದಲ್ಲದೆ ಸಂಘ ಸಂಸ್ಥೆಗಳಿಗೆ ದೇಣಿಗೆ ಉತ್ತೇಜನ ನೀಡುತ್ತಿರುವದು ಆ ಸಂಸ್ಥೆಗಳಿಗೆ ನೀವು ಮಾಡುತ್ತಿರುವ ನಿಜವಾದ ಸಹಕಾರವಾಗಿದೆ ಎಂದು ಹೇಳಿದರು. ಗೌರವಾಧ್ಯಕ್ಷ ಶ್ರೀನಿವಾಸ ನಾಯ್ಕ ಸರ್ಪನಕಟ್ಟೆ, ಉಪಾಧ್ಯಕ್ಷ ಕಿರಣ ಶೆಟ್ಟಿ ಮುರ್ಡೇಶ್ವರ, ಛಾಯಶ್ರೀ ಪ್ರಶಸ್ತಿ ಪುರಸ್ಕೃತ ಗಜಾನನ ಶೆಟ್ಟಿ ಮುರ್ಡೇಶ್ವರ, ಹಿರಿಯಾ ಛಾಯಗ್ರಾಹಕ ಕೆ.ಪಿ. ಮಣಿ, ರಾಘು ಜೋಗಿ ಭಟ್ಕಳ, ಮಾರುತಿ ನಾಯ್ಕ ಭಟ್ಕಳ ಸೇರಿ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top