ಬಾಳಿಗಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ
ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ವಿ.ಕೆ.ಭಟ್ ಶಿಕ್ಷಕನಾದವನು ಸಮಾಜದ ಋಣಗಳನ್ನು ತೀರಿಸಬೇಕು, ಸಮಾಜದ ಹೊಸ ಸವಾಲುಗಳನ್ನು ಸ್ವೀಕರಿಸಿ ಪರಿಹಾರಗಳನ್ನು ನೀಡಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.
ಅಧ್ಯಕ್ಷರಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೊ.ಪ್ರೀತಿ ಪಿ.ಭಂಡಾರಕರ ಮಾತನಾಡಿ, ಶಿಕ್ಷಕನಾದವನಿಗೆ ತಾಳ್ಮೆ, ಸಂಯಮ, ವಿಷಯ ಪ್ರಭುತ್ವ ಮತ್ತು ಮೌಲ್ಯಗಳು ಅಗತ್ಯ ಭವಿಷ್ಯದ ಜವಾಬ್ದಾರಿಯುತ ಶಿಕ್ಷಕರಾಗಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರ ಯಾದಿಯನ್ನು ಉಪನ್ಯಾಸಕಿ ಶ್ರೀಮತಿ ಗಾಯತ್ರಿ ಎನ್. ಪೈ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸ್ಪರ್ಧಾ ವಿಜೇತರ ಯಾದಿಯನ್ನು ದೈಹಿಕ ನಿರ್ದೇಶಕರಾದ ಜಿ.ಡಿ. ಭಟ್ ವಾಚಿಸಿದರು. ವಿದ್ಯಾರ್ಥಿ ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕು.ತೇಜಾ ನಾಯ್ಕ ವಾಚಿಸಿದರು. ಇತಿಹಾಸ ಆಲ್ಬಂ ಮತ್ತು ನಾಣ್ಯ ಸಂಗ್ರಹ ಬಿಡುಗಡೆಯನ್ನು ಕಾರ್ಯಕ್ರಮದ ಅತಿಥಿಗಳು ನೆರವೇರಿಸಿದರು. ಕು.ನಂದಿತಾ ನಾಯ್ಕ ಇತಿಹಾಸ ಆಲ್ಬಂ ಮತ್ತು ನಾಣ್ಯ ಸಂಗ್ರಹದ ಉದ್ದೇಶದ ಕುರಿತು ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಕು. ನಿಧಿ ದೇಶಭಂಡಾರಿ, ಕು.ನಿನಾದ ದೇಶಭಂಡಾರಿ, ಕು. ರಮ್ಯಾ ಭಟ್, ಶ್ರೀಮತಿ ನಯನಾ ಚಂದಾವರ ಕ್ರಮವಾಗಿ 1,3,6,9 ನೇ ರ‍್ಯಾಂಕ್ ಗಳಿಸಿರುವುದರಿಂದ ಮುಖ್ಯ ಅತಿಥಿಗಳು ಮತ್ತು ಗಣ್ಯರು ಸನ್ಮಾನಿಸಿದರು. ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಉಪನ್ಯಾಸಕಿ ಯಾಸ್ಮಿನ್ ಶೇಖ್ ಪರಿಚಯಿಸಿದರು.
ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ವಿ.ಕೆ. ಭಟ್‌ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕು. ಉಷಾ ಗೌಡ ಪ್ರಾರ್ಥಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕೆ. ಭಟ್ ಸ್ವಾಗತಿಸಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಜಿ.ಡಿ. ಭಟ್ ವಂದಿಸಿದರು. ಚೈತ್ರಾ ಎಮ್ ನಾಯ್ಕ ಮತ್ತು ಚೈತ್ರಾ ಮೋರೆ ಕಾರ್ಯಕ್ರಮ ನಿರೂಪಿಸಿದರು.