ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ಸಾಲಿನಲ್ಲಿ 60.70 ಲಕ್ಷ ರೂ.ಲಾಭ ಗಳಿಸಿದೆ ಎಂದು ಶ್ರೀಮಾತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹೀರೇಸರ ಹೇಳಿದರು.
ಅವರು ಸಂಘದ ಪ್ರಧಾನ ಕಾರ್ಯಾಲಯದ ಆವಾರದಲ್ಲಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟುಹಾಕಿ ಯಶಸ್ವಿ 20 ವರ್ಷ ಪೂರೈಸಿದ್ದು, ವರ್ಷವಿಡೀ ದ್ವಿದಶಮಾನೋತ್ಸವ ಆಚರಿಸಿಕೊಂಡಿದೆ.ಉತ್ತಮವಾಗಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಪ್ರಯೋಜನವಾಗುವ ವಿವಿಧ ಯೋಜನೆಗಳನ್ನು ರೂಪಿಸಲು ಸಂಘ ಚಿಂತನೆ ನಡೆಸಿದೆ. ಸಂಘವು ಈ ವರ್ಷ ಅಡಕೆ ದಲಾಲಿ ಅಂಗಡಿ ಪ್ರಾರಂಭಿಸಲು ನಿರ್ಧರಿಸಿದೆ ಎಂದರು.
ಇದೇ ವೇಳೆ ಉತ್ತಮ ಗ್ರಾಹಕರನ್ನು ಪುರಸ್ಕರಿಸಲಾಯಿತು. ಕ್ಯಾನ್ಸರ್ ಪೀಡಿತರಿಗೆ ಪರಿಹಾರ, ಅನುಕಂಪ ಪರಿಹಾರ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ, ನಿರ್ದೇಕರಾದ ಆರ್.ಎಲ್.ಭಟ್ಟ, ರವಿ ಹೆಗಡೆ ಹೀರೇಸರ, ಕೆ.ವಿ.ಭಟ್ಟ, ಶಿವರಾಮ ಶಾಸ್ತ್ರಿ, ಕೆ.ಎಸ್. ಭಟ್ಟ ಆನಗೋಡ, ಬಾಲಕೃಷ್ಣ ಭಟ್ಟ, ವಸುಮತಿ ಹೆಗಡೆ, ಶಕುಂತಲಾ ಹೆಗಡೆ, ವೆಂಕಟರಮಣ ಭಟ್ಟ, ಬೀರಪ್ಪ ನಾಯ್ಕ, ಮುಖ್ಯಕಾರ್ಯನಿರ್ವಾಹಕ ಗೋಪಾಲಕೃಷ್ಣ ಹೆಗಡೆ ಇತರರಿದ್ದರು.