Slide
Slide
Slide
previous arrow
next arrow

ಪೌರಕಾರ್ಮಿಕ ಆರೋಗ್ಯವಂತ ಸಮಾಜ ನಿರ್ಮಾಣದ ನಿರ್ಮಾತೃ: ಅಷ್ಪಾಕ್ ಶೇಖ್

300x250 AD

ದಾಂಡೇಲಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ

ದಾಂಡೇಲಿ : ನಗರ ಸಭೆಯ ಆಶ್ರಯದಡಿ ನಗರದ ಅಂಬೇಡ್ಕರ್ ಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್ ನಗರದ ಸ್ವಚ್ಚತೆಗಾಗಿ ಸದಾ ತಮ್ಮನ್ನು ತಾವು ಸಮರ್ಪಣಾಭಾವದಿಂದ ಸಮರ್ಪಿಸಿಕೊಂಡಿರುವ ಪೌರಕಾರ್ಮಿಕರು ಆರೋಗ್ಯವಂತ ಸಮಾಜ ನಿರ್ಮಾಣದ ನಿರ್ಮಾತೃಗಳಾಗಿದ್ದಾರೆ. ಪೌರಕಾರ್ಮಿಕರು ಸಮಾಜದ ಬಹುದೊಡ್ಡ ಶಕ್ತಿ. ಅವರನ್ನು ಗೌರವಾದರಗಳಿಂದ ನೋಡಿಕೊಳ್ಳುವುದನ್ನು ನಾವು, ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರ ಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ  ಪೌರಕಾರ್ಮಿಕರು ನಗರದ ಆಸ್ತಿ. ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ವೇದಿಕೆಯಲ್ಲಿ ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಸಂಜಯ್ ನಂದ್ಯಾಳ್ಕರ, ಮೌಲಾಲಿ ಮುಲ್ಲಾ, ಮೋಹನ ಹಲವಾಯಿ, ಮಜೀದ್ ಸನದಿ, ಬುದ್ಧಿವಂತಗೌಡ ಪಾಟೀಲ, ದಶರಥ ಬಂಡಿವಡ್ಡರ, ಅನಿಲ್ ನಾಯ್ಕರ್, ವಿಜಯ ಕೊಲೇಕರ, ಆಸೀಪ್ ಮುಜಾವರ,  ರುಕ್ಮಿಣಿ ಬಾಗಾಡೆ, ಶಾಹಿದಾ ಪಠಾಣ್, ಸಪೂರ ಯರಗಟ್ಟಿ, ಸುಧಾ ರಾಮಲಿಂಗ ಜಾಧವ, ವೆಂಕಟ್ರಮಣಮ್ಮ ಮೈಥುಕುರಿ, ರುಹಿನಾ ಖತೀಬ್, ಸುಗಂಧ ಕಾಂಬಳೆ, ಆಶ್ರಯ ಸಮಿತಿ ಸದಸ್ಯರಾದ ಪ್ರಭುದಾಸ ಎನಿಬೇರಾ, ನಗರ ಸಭೆಯ ಸಹಾಯಕ ಕಾರ‍್ಯನಿರ್ವಾಹಕ ಅಭಿಯಂತರರಾದ ನಾಗೇಂದ್ರ ದೊಡ್ಡಮನಿ, ನಗರ ಸಭೆಯ ಆರೋಗ್ಯ ನಿರೀಕ್ಷಕ ವಿಲಾಸ ದೇವಕರ, ನಗರ ಸಭೆಯ ಶುಭಂ ರಾಯ್ಕರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿವೇಣಿ ಮೊದಲಾದವರು ಉಪಸ್ಥಿತರಿದ್ದರು.

300x250 AD

ಕಾರ‍್ಯಕ್ರಮದಲ್ಲಿ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರನ್ನು, ಮನೆ, ಮನೆ ಕಸ ಸಂಗ್ರಹಕಾರರನ್ನು, ಚಾಲಕರನ್ನು, ಪೌರಕಾರ್ಮಿಕರ ಮೇಲ್ವಿಚಾರಕರನ್ನು, ನಗರ ಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅದಕ್ಕೂ ಮುನ್ನ ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಮತ್ತು ಉಪಾಧ್ಯಕ್ಷೆ ಶಿಲ್ಪಾ ಕೋಡೆ ಅವರನ್ನು ಪೌರಕಾರ್ಮಿಕರ ಪರವಾಗಿ ಸನ್ಮಾನಿಸಲಾಯ್ತು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ ಸ್ವಾಗತಿಸಿ, ವಂದಿಸಿ, ಕಾರ‍್ಯಕ್ರಮ ನಿರೂಪಿಸಿದರು. ಸಭಾ ಕಾರ‍್ಯಕ್ರಮ ಮುಗಿದ ಬಳಿಕ ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಜ್ಯೂನಿಯರ್ ಉಪೇಂದ್ರ ಅವರಿಂದ ರಸಮಂಜರಿ ಕಾರ‍್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ಸುಂದರವಾದ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದರು.

ಪೌರಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನಡೆಸಲಾಯಿತು.

Share This
300x250 AD
300x250 AD
300x250 AD
Back to top