Slide
Slide
Slide
previous arrow
next arrow

ದಸರಾ ಕ್ರೀಡಾಕೂಟದಲ್ಲಿ ವಯಸ್ಸಿನ ಮಿತಿಯಿಲ್ಲದೇ ಎಲ್ಲರೂ ಭಾಗವಹಿಸಿ: ಪ್ರಕಾಶ ನಾಯ್ಕ್

300x250 AD

ಹೊನ್ನಾವರ; ಜಿಲ್ಲಾಡಳಿತ, ಜಿ.ಪಂ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕ ಆಡಳಿತ, ತಾ.ಪಂ. ತಾಲೂಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಎಸ್.ಡಿ.ಎಂ. ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾದ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಎಸ್‌ಡಿಎಮ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಆರ್.ಕೆ.ಮೇಸ್ತ ಚಾಲನೆ ನೀಡಿ ಶುಭಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಕಾಶ ನಾಯ್ಕ,  ವಯಸ್ಸಿನ ಮಿತಿ ಇಲ್ಲದೆ ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದರು.

ಕ್ರೀಡೆಯು ನಮ್ಮನ್ನು ಮಾನಸಿಕವಾಗಿ,ದೈಹಿಕವಾಗಿ ಸದೃಢವಾಗಿ ಮಾಡುತ್ತದೆ.ಈ ಮೂಲಕ ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಪತ್ರಕರ್ತ ಎಚ್.ಎಮ್.ಮಾರುತಿ ಹೇಳಿದರು. ದಸರಾ ಕ್ರೀಡಾಕೂಟ ಆಯೋಜನೆಯಿಂದಾಗಿ ವಿವಿಧ ಊರುಗಳ ಅನೇಕ ಪ್ರತಿಭಾವಂತ ಕ್ರೀಡಾಪಟುಗಳ‌ ಪ್ರತಿಭೆಯ ಅನಾವರಣವಾಗುತ್ತದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ ನಾಯ್ಕ ಮಾತನಾಡಿ, ಹೊನ್ನಾವರದಲ್ಲಿ ಪ್ರತಿವರ್ಷವು ಉತ್ತಮವಾಗಿ ದಸರಾ ಕ್ರೀಡಾಕೂಟ ಆಯೋಜನೆಯಾಗುತ್ತಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿದ ಅನೇಕರು ರಾಜ್ಯ ರಾಷ್ಟ್ರಮಟ್ಟಕ್ಕೆ ತಲುಪಿದ ಉದಾರಣೆಗಳಿವೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ, ಅಂಕೋಲಾ ಐಟಿಐ ಕಾಲೇಜಿನ ಮುಖ್ಯತರಬೇತುದಾರ ದೀಪಕ್ ಗಾಂವ್ಕರ್, ಸಹಾಯಕ ಯುವ ಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ನಾಯ್ಕ, ಶಂಕರ ನಾಯ್ಕ, ಉಪಸ್ಥಿತರಿದ್ದರು. 

Share This
300x250 AD
300x250 AD
300x250 AD
Back to top