Slide
Slide
Slide
previous arrow
next arrow

ದಾಂಡೇಲಿಯ ತಹಶೀಲ್ದಾರರಿಗೆ ಹೊಸ ವಾಹನ ನೀಡುವಂತೆ ಮನವಿ

300x250 AD

ದಾಂಡೇಲಿ : ತಾಲೂಕಿನ ತಹಶೀಲ್ದಾರರ ವಾಹನವು ಹಳೆಯ ವಾಹನವಾಗಿದ್ದು, ತುರ್ತು ಸಂದರ್ಭದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಸಂಬಂಧಿಸಿದ ಸ್ಥಳಕ್ಕೆ ಹೋಗಲು ಈ ವಾಹನದ ದುಸ್ಥಿತಿಯಿಂದ ಕಷ್ಟ ಸಾಧ್ಯವಾಗುತ್ತಿದೆ. ಸರಿಸುಮಾರು 15 ವರ್ಷಗಳನ್ನು ಪೂರೈಸಿರುವ ತಹಶೀಲ್ದಾರರ ವಾಹನವು ತೀರಾ ಹಳೆಯದಾಗಿದ್ದು, ಸರಿಯಾಗಿ‌‌ ಕೆಲಸ ನಿರ್ವಹಿಸುತ್ತಿಲ್ಲ.

ವಾರಕ್ಕೊಮ್ಮೆ ಗ್ಯಾರೇಜ್ ಸೇರುತ್ತಿರುವ ಈ ವಾಹನವನ್ನು ಬದಲಾಯಿಸಿ ತಹಶೀಲ್ದಾರರಿಗೆ ಹೊಸ ವಾಹನವನ್ನು ಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರಸಭೆಯ ಸದಸ್ಯರಾದ ಮೋಹನ ಹಲುವಾಯಿ ಮತ್ತು ಸಂಜಯ ನಂದ್ಯಾಳ್ಕರ ಅವರು ಶನಿವಾರ ನಗರದಲ್ಲಿ ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top