ಶಿರಸಿ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡನಕೇರಿಯಲ್ಲಿ ಗ್ರಾಮ ಪಂಚಾಯತ್ ಹಲಗದ್ದೆ ಸ. ಹಿ. ಪ್ರಾ. ಶಾಲೆ ಮಾಡನಕೇರಿ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವರದಾ ದಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಹಿ ಸೇವಾ ಪಾಕ್ಷಿಕದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಲಗದ್ದೆ ಗ್ರಾಮ ಪಂಚಾಯತ್ ಅಭಿವೖದ್ಧಿ ಅಧಿಕಾರಿ ವೀರೇಶ್, ಕಾರ್ಯದರ್ಶಿ ಈರಪ್ಪ ಚೆನ್ನಯ್ಯ, ಪಂಚಾಯತ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಮನೋಜ, ಆನಂದ ಗೌಡ, ಮಧುಕೇಶ್ವರ ನಾಯ್ಕ, ಗ್ರಾ. ಪಂ. ಸದಸ್ಯರಾದ ಸದಾನಂದ ನಾಯ್ಕ, ಮಾಡನಕೇರಿ ಎಸ್. ಡಿ. ಎಂ. ಸಿ. ಅಧ್ಯಕ್ಷ ಅಣ್ಣಪ್ಪ ನಾಯ್ಕ, ಉಪಾಧ್ಯಕ್ಷೆ ರೇಖಾ ಗೌಡರ್, ಮುಖ್ಯಾಧ್ಯಾಪಕಿ ಎಚ್. ಪಿ. ಗೀತಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಶಿರಸಿಯ ಕಾರ್ಯದರ್ಶಿ ಹಾಗೂ ಶಿಕ್ಷಕ ಎನ್. ಎಸ್. ಭಾಗ್ವತ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸ್ವಚ್ಛತಾ ಕಾರ್ಯದಲ್ಲಿಎಸ್. ಡಿ. ಎಂ. ಸಿ. ಸದಸ್ಯರು ಪಾಲಕ ಪೋಷಕರು, ಪೂರ್ವ ವಿದ್ಯಾರ್ಥಿಗಳು, ಪವಿತ್ರಾ ಅಣ್ಣಪ್ಪ ನಾಯ್ಕ, ಮಾಡನಕೇರಿಯ ಶ್ರೀ ದುರ್ಗಾ ಸ್ತ್ರೀ ಶಕ್ತಿ ಸಂಘ, ಜೖ ಮಾತಾ ಸ್ತ್ರೀ ಶಕ್ತಿ ಸಂಘ, ಮಾರಿಕಾಂಬಾ ಸ್ತ್ರೀ ಶಕ್ತಿ ಸಂಘ, ಶ್ರೀ ಲಲಿತೆ ಸ್ತ್ರೀ ಶಕ್ತಿ ಸಂಘ, ವೀರಭದ್ರೇಶ್ವರ ಸ್ತ್ರೀ ಶಕ್ತಿ ಸಂಘ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಗಳಾದ ದರ್ಶನ್, ಆದರ್ಶ, ವಿಶ್ವ ಮತ್ತು ರೇಂಜರ್ಸ್ ಗಳಾದ ಸುಜಾತಾ, ಮಾನಸ, ನಾಗಶ್ರೀ ಸೇರಿದಂತೆ ನೂರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಶಿಕ್ಷಕರಾದ ಸ್ಕೌಟ್ ಮಾಸ್ಟರ್ ಎನ್. ಎಸ್. ಭಾಗ್ವತ್ ಕಾರ್ಯಕ್ರಮದ ಬಗ್ಗೆ ತಿಳಿಸಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.