Slide
Slide
Slide
previous arrow
next arrow

ಶಿರಸಿ ಡೆವಲಪ್ಮೆಂಟ್ ಸೊಸೈಟಿಗೆ 7.60ಲಕ್ಷ ರೂ. ಲಾಭ

300x250 AD

ಶಿರಸಿ: ಇಲ್ಲಿನ ದಿ ಎಗ್ರಿಕಲ್ಚರಲ್ ಸರ್ವೀಸ್ ಎಂಡ್ ಡೆವಲಪಮೆಂಟ್ ಕೊ- ಆಪ್ ಸೊಸೈಟಿ ಲಿ, ಶಿರಸಿ ಇದರ 53ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಸೆ.17 ಜರುಗಿದ್ದು, ಸಂಘದ ಆಡಳಿತ ಮಂಡಳಿಯವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ಸಭೆಯಲ್ಲಿ 2023-24ನೇ ಸಾಲಿನಲ್ಲಿ ಸಂಘದ ಮುಖ್ಯವಿಭಾಗದಲ್ಲಿ ರೂ.20 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿದ 2 ಸಹಕಾರಿ ಸಂಘಗಳು ಹಾಗೂ ರೂ.5 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿದ 4 ಗ್ರಾಹಕರನ್ನು ಸನ್ಮಾನಿಸಲಾಯಿತು. ನಂತರದಲ್ಲಿ ಸಂಘದ ಅಧ್ಯಕ್ಷರಾದ ಭಾಸ್ಕರ ಹೆಗಡೆ ಕಾಗೇರಿ ಎಲ್ಲರನ್ನೂ ಸ್ವಾಗತಿಸಿ, ಸಂಘದ ಉದ್ದೇಶ ಸಂಸ್ಥಾಪಕರ ಆಶಯಗಳನ್ನು ವಿವರಿಸುತ್ತಾ ಸಂಘವು ಪ್ರಗತಿಪಥದಲ್ಲಿ ಮುಂದುವರೆಯುತ್ತಿದ್ದು 7.60 ಲಕ್ಷ ಲಾಭದಲ್ಲಿದೆ ಎಂಬುದನ್ನು ಸಭೆಗೆ ತಿಳಿಸಿದರು. ಮುಖ್ಯಕಾರ್ಯನಿರ್ವಾಹಕರಾದ ಗೋಪಾಲ ಹೆಗಡೆ ಇವರು ಸಭೆಯ ಕಾರ್ಯಕಲಾಪಗಳನ್ನು ನಡೆಸಿಕೊಟ್ಟರು. ಸಂಘದ ಉಪಾಧ್ಯಕ್ಷರಾದ ಜಿ.ಆರ್. ಹೆಗಡೆ ಬೆಳ್ಳೇಕೆರಿಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಸಭೆಯಲ್ಲಿ ಸಂಘದ ಲೆಕ್ಕಪರಿಶೋಧಕರಾದ ಎಸ್.ಜಿ. ಹೆಗಡೆ ಶಿರಸಿ ಹಾಗೂ ಸಂಘದ ಸದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top