ಕಾರವಾರ: ವಿಶ್ವಕರ್ಮನನ್ನು ಬ್ರಹ್ಮಾಂಡದ ಸೃಷ್ಠಿಕರ್ತ ಮತ್ತು ಪ್ರಪಂಚದ ಮೊದಲ ವಾಸ್ತುಶಿಲ್ಪಿ ಎಂದು ಕರೆಯಲಾಗುತ್ತದೆ. ಬ್ರಹ್ಮನ ಆಜ್ಞೆಯ ಮೇರೆಗೆ ವಿಶ್ವಕರ್ಮನು ಜಗತ್ತನ್ನು ಸೃಷ್ಠಿಸಿದವನು ಎಂದು ನಂಬಲಾಗಿದ್ದು, ಅವರು ಕೌಶಲ್ಯದ ಸೃಷ್ಟಿಕರ್ತರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿಯನ್ನು ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶಿವನ ತ್ರಿಶೂಲ, ವಿಷ್ಣುವಿನ ಸುದರ್ಶನ, ರಾವಣನ ಲಂಕಾ ಮತ್ತು ಪುಷ್ಪಕ ವಿಮಾನ, ಜಗನ್ನಾಥಪುರಿ, ವಾದ್ಯಗಳ ನಿರ್ಮಾಣ, ವಿಮಾನ ವಿದ್ಯೆ, ದೇವತೆಗಳ ಸ್ವರ್ಗ, ಹಸ್ತಿನಾಪುರ, ಕೃಷ್ಣನ ದ್ವಾರಕೆ, ಇಂದ್ರಪುರಿ ಮುಂತಾದ ದೇವರುಗಳು ಬಳಸುವ ಆಯುಧಗಳನ್ನು ಸ್ವತಃ ವಿಶ್ವಕರ್ಮರು ಸಿದ್ಧಪಡಿಸಿದ್ದರು ಎಂದು ನಂಬಲಾಗಿದ್ದು, ಇಂದಿನ ಕುಶಲಕರ್ಮಿಕರು ಇಂಜಿನೀಯರ್‌ಗಳು ಮತ್ತು ವಾಸ್ತುಶಿಲ್ಪಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಭಾರತೀಯರು ತಮ್ಮದೇ ಆದ ಕೌಶಲ್ಯಗಳಲ್ಲಿ ಪರಿಣಿತರಾಗಿದ್ದಾರೆ. ಹಂಪಿ, ಪಟ್ಟದ ಕಲ್ಲು ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಶಿಲ್ಪಿಗಳ ಕೆತ್ತನೆ ಬಹಳ ಸುಂದರವಾಗಿದೆ ಎಂದ ಅವರು, ಪ್ರತಿಯೊಬ್ಬರ ಭವಿಷ್ಯ ಅವರ ಕೈಯಲ್ಲಿಯೇ ಇರುತ್ತದೆ, ಶಿಕ್ಷಕರು ಬರೀ ಮಾರ್ಗವನ್ನು ತೋರಿಸುತ್ತಾರೆ ಅದನ್ನು ಅರಿತು ಉತ್ತಮ ದಾರಿಯಡೆ ಸಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ತಿನ ರಾಜ್ಯ ಉಪಧ್ಯಾಕ್ಷ ರಾಘವೇಂದ್ರ ಆಚಾರ್ಯ ವಿಶ್ವಕರ್ಮನ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರತಿ ಕನ್ಯಾ ಸಂಕ್ರಾಮಣದ ದಿನದಂದು ಭಗವಂತನ್ನು ಭೂಮಿಗೆ ಕರೆದ ದಿನವನ್ನು ವಿಶ್ವಕರ್ಮ ಜಯಂತಿಯನ್ನಾಗಿ ಆಚರಿಸುತ್ತೆವೆ, ಸನಾತನ ಧರ್ಮ, ಸಂಸ್ಕೃತಿ, ವಿಶ್ವಕರ್ಮರವರಿಂದ ಜಾಗೃತೆಯಾಗಿದೆ, ಅವರು ಸಮಾಜಕ್ಕೆ ಅತ್ಯಂತ ಕೊಡುಗೆ ನೀಡಿದ್ದಾರೆ.
ಪಂಚ ಕಸುಬು ನಿರ್ಮಿಸುತ್ತಿರು ವಿಶ್ವಕರ್ಮ ಸಮಾಜಕ್ಕೆ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ, ಜಿಲ್ಲೆಯಲ್ಲಿ ಅನೇಕ ಶಿಲ್ಪಿಗಳು ಇzದ್ದು, ಅವರನ್ನು ಗುರುತ್ತಿಸುವಂತ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.