Slide
Slide
Slide
previous arrow
next arrow

ಸೆ.27ರಿಂದ ಸ್ವದೇಶಿ ಉತ್ಪನ್ನ ಪ್ರದರ್ಶನ, ಮಾರಾಟ

300x250 AD

ಹೊನ್ನಾವರ : ಕುಂದಾಪುರ ತಾಲೂಕಿನ ಗಂಗೊಳ್ಳಿಯ ತ್ರಿಮಧುರ ಗೋ ಸಂವರ್ಧನ ಟ್ರಸ್ಟ್ ವತಿಯಿಂದ ದಸರಾ ಹಬ್ಬದ ಅಂಗವಾಗಿ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಸೆ.27 ರಿಂದ 29ರವರೆಗೆ ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಕಾರ್ಯದರ್ಶಿ ರಂಜಿತ ತಿಳಿಸಿದರು.

ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಟ್ರಸ್ಟಿನಿಂದ ಗೋವುಗಳ ಉತ್ಪನ್ನದ ಜೊತೆಗೆ ಸ್ಥಳೀಯ ಸಂಜೀವಿನಿ ಸ್ತ್ರೀಶಕ್ತಿ ಸಂಘದ 10 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಣ್ಣಿನಿಂದ ತಯಾರಿಸಿದ ಮಡಕೆಗಳು, ಚೆನ್ನರಾಯ ಪಟ್ಟಣದ ಆಟಿಕೆ ವಸ್ತುಗಳು ಮುಂತಾದ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ತಿಳಿಸಿದರು.

300x250 AD

ಸುದ್ದಿಗೋಷ್ಠಿಯಲ್ಲಿ ಟ್ಟಸ್ಟಿನ ಸದಸ್ಯರಾದ ಸಂಪತ್, ಅಜತಾ ರಂಜಿತಾ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top