Slide
Slide
Slide
previous arrow
next arrow

ಟಿಆರ್‌ಸಿಗೆ ಅತ್ಯುತ್ತಮ ಸಾಧನಾ ಪ್ರಶಸ್ತಿ ಪ್ರದಾನ

300x250 AD

ಅಪೆಕ್ಸ್ ಬ್ಯಾಂಕ್ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ ರಾಮಕೃಷ್ಣ ಹೆಗಡೆ ಕಡವೆ

ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ವಿವಿಧ ವೈಶಿಷ್ಟತೆಯನ್ನು ಹೊಂದಿರುವ ಇಲ್ಲಿನ ಟಿಆರ್‌ಸಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯಮಟ್ಟದ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅವರಿಗೆ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ ಬ್ಯಾಂಕಿನ ನಿರ್ದೇಶಕರೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಹಾಗೂ ಅಪೆಕ್ಸ್ ಬ್ಯಾಂಕ್‌ನ ಬಹುಮಾನ ಯೋಜನೆಯನ್ವಯ ಐವತ್ತು ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ಟಿಆರ್‌ಸಿಯ ಪ್ರಭಾರ ಮುಖ್ಯಕಾರ್ಯನಿರ್ವಾಕರಾದ ಕಿರಣ ಶ್ರೀಪಾದ ಭಟ್ ಮಾವಿನಕೊಪ್ಪ ಅವರಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ, ಶಾಸಕ ಶಿವರಾಮ ಹೆಬ್ಬಾರ, ಅಪೆಕ್ಸ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು, ಶಾಸಕರು, ಸಚಿವರು, ಹಾಗೂ ಟಿಆರ್‌ಸಿಯ ಉಪಾಧ್ಯಕ್ಷರಾದ ವಿಶ್ವಾಸ ಬಲ್ಸೆ ಚವತ್ತಿ, ನಿರ್ದೇಶಕರಾದ ಶಿವಾನಂದ ಭಟ್ಟ ನಿಡಗೋಡ ಹಾಗೂ ಆರ್.ವಿ. ಹೆಗಡೆ ಚಿಪಗಿ, ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಕುರುವಣಿಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

300x250 AD

ಸದಸ್ಯರಿಗೆ ಅರ್ಪಣೆ : ಸಂಘಕ್ಕೆ ರಾಜ್ಯಮಟ್ಟದ ಅತ್ಯುತ್ತಮ ಸಾಧನಾ ಪ್ರಶಸ್ತಿ ತೃತೀಯ ಬಹುಮಾನ ದೊರೆಯಲು ಟಿಆರ್‌ಸಿ ಸದಸ್ಯರ ಅಭೂತಪೂರ್ವ ಸಹಕಾರ, ಸಂಘದೊಂದಿಗಿನ ಪ್ರಾಮಾಣಿಕ ವ್ಯವಹಾರವೇ ಮುಖ್ಯ ಕಾರಣವಾಗಿದೆ. ಆದ್ದರಿಂದ ಸಂಘವು ಸ್ವೀಕರಿಸಿದ ರಾಜ್ಯಮಟ್ಟದ ಪ್ರಶಸ್ತಿಯನ್ನು ಟಿಆರ್‌ಸಿಯ ಸರ್ವ ಸದಸ್ಯರಿಗೆ ಅರ್ಪಿಸುತ್ತಿದ್ದೇವೆ ಮತ್ತು ಸಂಘದ ಸಿಬ್ಬಂದಿಗಳ ಪ್ರಾಮಾಣಿಕ ಪರಿಶ್ರಮವೂ ಇದರಲ್ಲಿದೆ ಎಂದು ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಹೇಳಿದ್ದಾರೆ.


ಸಹಕಾರ ಕ್ಷೇತ್ರ ಅದೊಂದು ಸೇವಾ ವಲಯವಾಗಿದೆ. ಸದಸ್ಯರಿಗೆ ಗರಿಷ್ಠ ಪ್ರಮಾಣದಲ್ಲಿ ಸೇವಾ ಸೌಲಭ್ಯ ಒದಗಿಸುವುದೇ ಸಹಕಾರ ವ್ಯವಸ್ಥೆಯ ಪ್ರಮುಖ ಧ್ಯೇಯ. ಈ ಧ್ಯೇಯವನ್ನೇ ನಮ್ಮ ಸಂಘದಲ್ಲಿ ಅಳವಡಿಸಿಕೊಂಡು ರೈತರ ಆಶೋತ್ತರಗಳಿಗೆ ಸದಾ ಸ್ಪಂದಿಸಿ ಸೇವೆ ಸಲ್ಲಿಸುತ್ತಿರುವ ಸಂಘದ ಉತ್ತಮ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.

  • ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್‌ಸಿ
Share This
300x250 AD
300x250 AD
300x250 AD
Back to top