Slide
Slide
Slide
previous arrow
next arrow

ಚಿನ್ನದ ಪದಕ ಪಡೆದ ಸುಗಾವಿಯ ಅನುಷಾ ಹೆಗಡೆ

300x250 AD

ಶಿರಸಿ: ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವವು “ಜ್ಞಾನಜ್ಯೋತಿ” ಸಭಾಂಗಣದಲ್ಲಿ ಸೆ.10 ರಂದು ವಿಜೃಂಭಣೆಯಿಂದ ಜರುಗಿದ್ದು, “ಮಾಸ್ಟರ್ ಆಫ್ ಬಿಸನೆಸ್ ಅಡ್ಮಿನಿಸ್ಟ್ರೇಶನ್” ವಿಷಯದಲ್ಲಿ ಫಸ್ಟ್ ಕ್ಲಾಸ್ ಡಿಸ್ಟಿಂಕ್ಷನ್– ಎ ಯೊಂದಿಗೆ ಶ್ರೀಮತಿ ಅನುಷಾ ಹೆಗಡೆ ಸುಗಾವಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.

ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದ ಉಪಾಧ್ಯಕ್ಷ ಮತ್ತು ಸಮಾಜ ವಿಜ್ಞಾನ ಸಂಶೋಧನೆಯ ಭಾರತೀಯ ಪರಿಷದ್ ಉಪಾಧ್ಯಕ್ಷ ಪ್ರೊ. ದೀಪಕ ಕುಮಾರ ಶ್ರೀವಾಸ್ತವ ಮುಖ್ಯ ವಕ್ತಾರರಾಗಿದ್ದು, ಚಲನಚಿತ್ರ ಖ್ಯಾತ ಸಂಗೀತ ನಿರ್ದೇಶಕ ಡಾ| ಗುರುಕಿರಣ್, ಪದ್ಮಶ್ರೀ ಪುರಸ್ಕೃತ, ಖ್ಯಾತ ಉದ್ಯಮಿ ಡಾ| ಕೆ.ಎಸ್.ರಾಜಣ್ಣ ಬೆಂಗಳೂರು, ಡಾ|| ಎಂ.ಎಸ್.ಜಯಕರ ಹಾಗೂ ಕುಲಪತಿಗಳು ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು, ಸಿಂಡಿಕೇಟ್ ಸದಸ್ಯರು, ಉಪಸ್ಥಿತರಿದ್ದರು.

300x250 AD

ಶ್ರೀಮತಿ ಅನುಷಾ ಹೆಗಡೆ, ಸೋಂದಾ ಬಾಡಲಕೊಪ್ಪದ ರತ್ನಾಕರ ಹೆಗಡೆ ಹಾಗೂ ಶ್ರೀಮತಿ ಗಿರಿಜಾ ಹೆಗಡೆ ದಂಪತಿಗಳ ಮಗಳಾಗಿದ್ದು, ಶಿರಸಿ ಸುಗಾವಿಯ ಪಣತದಮನೆಯ ಶಶಾಂಕ ಹೆಗಡೆ ಧರ್ಮಪತ್ನಿಯಾಗಿದ್ದಾಳೆ. ಚಿಕ್ಕಂದಿನಿಂದಲೂ ಪ್ರತಿಭಾನ್ವಿತೆಯಾಗಿದ್ದ ಅನುಷಾ ಹೆಗಡೆ ಪತಿಯ ಬೆಂಬಲದೊಂದಿಗೆ ಬೆಂಗಳೂರಿನ ಆಚಾರ್ಯ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಸೈನ್ಸ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಚಿನ್ನದ ಪದಕದೊಂದಿಗೆ ರ‍್ಯಾಂಕ್ ಗಿಟ್ಟಿಸಿ ಮಹಾವಿದ್ಯಾಲಯಕ್ಕೂ ಮತ್ತು ತವರಿಗೂ ಕೀರ್ತಿ ತಂದಿದ್ದಾಳೆ.

Share This
300x250 AD
300x250 AD
300x250 AD
Back to top