ಸಿದ್ದಾಪುರ: ತಾಲೂಕಿನ ಮುಗದೂರಿನ ಶ್ರೀರಕ್ಷಾ ರವೀಂದ್ರ ಹೆಗಡೆ ಅವಲಕ್ಕಿಯ ಮೇಲೆ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸಗೆ ಸೇರ್ಪಡೆಯಾಗಿರುವದರಿಂದ ಅವರನ್ನು ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಹಾಗೂ ಸರಸ್ವತಿ ಕಲಾಟ್ರಸ್ಟ್ ಹೊಸಗದ್ದೆ ಇವರಿಂದ ಗೌರವಿಸಲಾಯಿತು. ಡಾ.ಶಶಿಭೂಷಣ ದೊಡ್ಮನೆ, ಪಿ.ವಿ.ಹೆಗಡೆ ಹೊಸಗದ್ದೆ, ಅನಂತ ಶಾನಭಾಗ, ಪುರುಷೋತ್ತಮ ಹೆಗಡೆ, ಶಶಿಧರ ಗೌಡರ್, ಸಿ.ಎನ್.ಹೆಗಡೆ, ಪ್ರಸನ್ನ ಹೆಗಡೆ, ರವೀಂದ್ರ ಹೆಗಡೆ ದಂಪತಿ ಇತರರಿದ್ದರು.
ಅವಲಕ್ಕಿ ಮೇಲೆ ರಾಷ್ಟ್ರಗೀತೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಶ್ರೀರಕ್ಷಾ
