ಭಟ್ಕಳ: ದಾಂಡೇಲಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ಎನ್.ವಾಸರೆ ಅವರ ಮೇಲೆ ಅಲ್ಲಿನ ಸಿ.ಪಿ.ಐ. ಭೀಮಣ್ಣ ಸೂರಿ ಅವರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ದಾಂಡೇಲಿಯ ಪೊಲೀಸ್ ಇನ್ಸ್‌ಪೆಕ್ಟರ್ ಭೀಮಣ್ಣ ಸೂರಿ ಅವರು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಬಿ.ಎನ್. ವಾಸರೆ ಅವರನ್ನು ಅಗೌರವವಾಗುವ ರೀತಿಯಲ್ಲಿ ನಡೆಸಿಕೊಂಡಿದ್ದನ್ನು ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸೌಜನ್ಯಯುತವಾಗಿ ವರ್ತಿಸಬೇಕಾದ ಸರಕಾರದ ಓರ್ವ ಅಧಿಕಾರಿಯೇ ಈ ರೀತಿಯಾಗಿ ಪತ್ರಕರ್ತರನ್ನು ನಡೆಸಿಕೊಂಡಿರುವುದು ಸರಕಾರಕ್ಕೆ ಶೋಭೆ ತರುವಂತದ್ದಲ್ಲ. ಪತ್ರಕರ್ತರಿಗೆ ಭದ್ರತೆ ನೀಡಬೇಕಾದ ಅಧಿಕಾರಿಯಿಂದ ಈ ರೀತಿಯ ವರ್ತನೆ ಸಮರ್ಥನೀಯ ಕೂಡಾ ಅಲ್ಲ. ಜಿಲ್ಲೆಯಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ ಇಂತಹ ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಬೇಕಾಗಿದೆ. ಅಧಿಕಾರಿಗಳ ಈ ನಡೆಯನ್ನು ನಾವು ತೀವ್ರವಾಗಿ ಖಂಡಿಸಿದ ಸಂಘವು ತಕ್ಷಣ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತಯೂ ಮನವಿಯಲ್ಲಿ ಆಗ್ರಹಿಸಿದೆ.
ಈ ಬಗ್ಗೆ ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಮಾತನಾಡಿ ಪೊಲೀಸ ಇಲಾಖೆ , ವಕೀಲರು ಹಾಗೂ ಪತ್ರಕರ್ತರು ಈ ಮೂವರ ಸಂಬಂಧ ಸಮಾಜದಲ್ಲಿ ಒಳ್ಳೆಯದಾಗಿರಬೇಕು. ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲಿ ನಾವು ಸಹಕಾರದಿಂದ ಕೆಲಸ ಮಾಡಬೇಕು. ಈ ಮೂರು ಕ್ಷೇತ್ರಗಳಲ್ಲಿ ಅಸಮಾಧಾನ ಉಂಟಾದರೆ ಇಡೀ ವ್ಯವಸ್ಥೆ ಹಾಳಾಗುವ ಪರಿಸ್ಥಿತಿ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ನಡೆದ ಈ ಘಟನೆಯನ್ನು ಭಟ್ಕಳದ ಎಲ್ಲಾ ಪತ್ರಕರ್ತರು ಖಂಡಿಸುತ್ತೇವೆ ಹಾಗೂ ಇದಕ್ಕೆ ಸರ್ಕಾರ ಮತ್ತು ಪೊಲೀಸ ಇಲಾಖೆ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು
ನಂತರ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ
ಇಂತಹ ಘಟನೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿಯೂ ನಡೆಯಬಾರದು. ಅಧಿಕಾರಿಗಳು ತಮ್ಮ ಈ ತರಹದ ಧೋರಣೆಗಳನ್ನು ಬಡಲಾಯಿಸಿಕೊಳ್ಳ ಬೇಕು. ಬಿ.ಎನ್.ವಾಸರ ಕ.ಸಾ.ಪ ದ ಜಿಲ್ಲಾಧ್ಯಕ್ಷ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಹಾಗೂ ಬಹಳ ವರ್ಷದಿಂದ ಪತ್ರಕರ್ತರಾಗಿ ಬಹಳ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹವರ ಮೇಲೆ ಇಂತಹ ಘಟನೆ ನಡೆದಿರುವುದು ಭಟ್ಕಳದ ಎಲ್ಲಾ ಪತ್ರಕರ್ತರು ಖಂಡಿಸುತ್ತೇವೆ ಹಾಗೂ ಗ್ರಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಉಪ ವಿಭಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಸೀಲ್ದಾರ
ಕಚೇರಿ ಶಿರಸ್ತೆದಾರ ಪ್ರವೀಣ ಅವರು ಮನವಿಯನ್ನು ಸ್ವೀಕರಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ, ಕಾರ್ಯದರ್ಶಿ ಶೈಲೇಶ ವೈದ್ಯ, ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಉಪಾಧ್ಯಕ್ಷ ಮೋಹನ ನಾಯ್ಕ, ಜಿಲ್ಲಾ ಸಮಿತಿ ಸದಸ್ಯ ಫಯಾಜ್ ಮುಲ್ಲಾ, ಸದಸ್ಯರಾದ ಅತಿಕುರ್‌ರೆಹಮಾನ್, ಇನಾಯತ್‌ವುಲ್ಲಾ ಶಾಬಂದ್ರಿ, ಅಝರ್ ಬರ್ಮಾವರ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಕಾರ್ಯದರ್ಶಿ ಮನಮೋಹನ ನಾಯ್ಕ, ಸದಸ್ಯರಾದ ಪ್ರಸನ್ನ ಭಟ್ಟ, ಎಸ್. ಉದಯ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.