Slide
Slide
Slide
previous arrow
next arrow

ಮ್ಯಾರಥಾನ್ ಓಟದ ಸ್ಪರ್ಧೆಗೆ ಅಪರ ಜಿಲ್ಲಾಧಿಕಾರಿ ಚಾಲನೆ

300x250 AD

ಕಾರವಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆಸ್ಪತ್ರೆ ಕಾರವಾರ, ಪದವಿ ಮಹಾವಿದ್ಯಾಲಯಗಳು, ರೆಡ್ ರಿಬ್ಬನ್ ಕ್ಲಬ್, ಎನ್.ಎಸ್.ಎಸ್ ಘಟಕ, ಕೂರ್ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ, 17 ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳಿಗೆ, ಆಯೋಜಿಸಿದ್ದ 5 ಕಿ.ಮೀ ಮ್ಯಾರಥಾನ ರೆಡ್ ರಿಬ್ಬನ್ ಓಟದ ಸ್ಪರ್ಧೆಗೆ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಹರ್ಷ ವೆಂಕಟೇಶ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, “ಯುವಜನತೆಯಲ್ಲಿ ಹೆಚ್.ಐ.ವಿ/ಏಡ್ಸ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮ್ಯಾರಥಾನ ಸ್ಪರ್ಧೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವಜನತೆಯಲ್ಲಿ ಡ್ರಗ್ಸ್ ಮಾದಕವಸ್ತು ಮತ್ತು ಅಸುರಕ್ಷಿತ ಲೈಂಗಿಕತೆಯಿಂದ ಹೆಚ್.ಐ.ವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವಜನತೆ ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಇದರ ಬಗ್ಗೆ ಮಾತನಾಡಲು ಯಾವುದೇ ಮುಜುಗರ ಬೇಡ” ಎಂದು ಹೇಳಿದರು.
ಹುಡುಗರ ವಿಭಾಗದಲ್ಲಿ ಸಿದ್ದಾಪುರದ ಪ್ರಥಮ ದರ್ಜೆ ಕಾಲೇಜಿನ ಪ್ರಜ್ವಲ್.ಸಿ.ನಾಯ್ಕ ಪ್ರಥಮ ಸ್ಥಾನವನ್ನು, ಕಾರವಾರದ ಶಿವಾಜಿ ಕಾಲೇಜ ಬಾಡ ವಿದ್ಯಾರ್ಥಿ ಜೋಸೆಫ್ ಎಲ್ ಸಿದ್ಧಿ, ದ್ವಿತೀಯ ಸ್ಥಾನ, ಅಂಕೋಲಾದ ಸರಕಾರಿ ಪದವಿ ಕಾಲೇಜಿನ ಮನೀಶ ಎಚ್ ನಾಯಕ್ ತೃತೀಯ ಸ್ಥಾನ ಪಡೆದುಕೊಂಡರು. ಸಮಾದಾನಕರ ಬಹುಮಾನವನ್ನು ಕಾರ್ತಿಕ ಸಂತೋಸ ನಾಯ್ಕ, ವಿನಾಯಕ ನಾಯ್ಕ, ಗುರುನಾಥ ಎಸ್, ಪ್ರಜ್ವಲ್ ಆರ್.ಡಿ ಪಡೆದು ಕೊಂಡರು.
ಹುಡುಗಿಯರ ವಿಭಾಗದಲ್ಲಿ ಶಿರಸಿಯ ಪ್ರಥಮ ದರ್ಜೆ ಕಾಲೇಜಿನ ಪೂಜಾ ಪಿ ನಾಯ್ಕ ಪ್ರಥಮ ಸ್ಥಾನವನ್ನು, ಕಾರವಾರದ ಮಹಾಸತಿ ಕಾಲೇಜಿನ ವಿದ್ಯಾರ್ಥಿ ಆರ್.ವಾಯ್ ನಮೀತಾ ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ಬಿಂದು ಎಸ್ ಹಿರೇಮಠ ರವರು ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಪೂರ್ವಿ ಹರಿಕಂತ್ರ, ಚಂದ್ರಿಕಾ ಸುಧಾಕರ ಗೌಡ, ಸಿಂಧೂ ಸಿ ಹುಲಸ್ವಾರ, ಪುಷ್ಪಾ ಮೊಗೇರ ಪಡೆದು ಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ.ವಿ.ನೀರಜ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ನಟರಾಜ, ಶಿವಾಜಿ ಶಿಕ್ಷಣ ಕಾಲೇಜಿನ ಪ್ರಾಚಾರ್ಯರು ನವೀನ ದೇವರಬಾವಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮ್ಯಾರಥಾನ ಓಟದ ಸ್ಪರ್ಧೆಯ ಸಂಪೂರ್ಣ ನಿರ್ವಹಣೆಯನ್ನು ಮುಖ್ಯ ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top