Slide
Slide
Slide
previous arrow
next arrow

ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು:

300x250 AD

ಸುಲಭಃ ಸುವೃತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ| ನ್ಯಗ್ರೋಧೋದುಂಬರೋSಶ್ವತ್ಥಶ್ ಚಾಣೂರಾಂಧ್ರನಿಷೂದನಃ ||

ಭಾವಾರ್ಥ: ಇವನು (ಮಹಾವಿಷ್ಣು) ಕಷ್ಟವಿಲ್ಲದೆ ದೊರೆಯುವವನು. ಪ್ರಯತ್ನ ಮಾಡುವವವರಿಗೆ ‘ಸುಲಭನು’. ಅನನ್ಯ ಚೇತಾಃ ಸತತಮ್………. ತಸ್ಯಾಹಂ ಸುಲಭಃ ನಿತ್ಯಯುಕ್ತಸ್ಯ ಎಂದು ಮಹಾಭಾರತದಲ್ಲಿದೆ. ಒಳ್ಳೆಯದನ್ನು ವೃತವವಾಗಿ ಮಾಡಿಕೊಂಡಿರುತ್ತಾನೆ. ಎಂದರೆ ಭುಂಜಿಸುತ್ತಾನೆ ಅಥವಾ ಭೋಜನವನ್ನು ಬಿಟ್ಟುಬಿಟ್ಟಿರುತ್ತಾನೆ. ಆದ್ದರಿಂದ ‘ಸುವ್ರತನು’ ಮತ್ತೊಬ್ಬರಿಗೆ ಆಧೀನವಲ್ಲದ ಸಿದ್ಧಿಗಳುಳ್ಳವನಾದ್ದರಿಂದ ‘ಸಿದ್ಧನು’. ದೇವತೆಗಳ ಶತ್ರುಗಳೇ ಈತನಿಗೆ ಶತ್ರುಗಳು,ಅವರನ್ನು ಜಯಿಸುತ್ತಾನಾದ್ದರಿಂದ ‘ಶತ್ರುಜಿತ್’ ಎನಿಸುವನು. ದೇವತೆಗಳಿಗೆ ಶತ್ರುಗಳಿಗೆ ತಾಪವನ್ನುಂಟು ಮಾಡುತ್ತಾನೆ. ಆದ್ದರಿಂದ ‘ಶತ್ರುತಾಪನು’. ‘ನ್ಯಗ್ರೋಧಃ’ ಎಂದರೆ ಎಲ್ಲಕ್ಕಿಂತಲೂ ಮೇಲಿರುವವನು.ಪ್ರಪಂಚದಲ್ಲಿರುವ ಯಾವುದೇ ಪ್ರಿಯವಾದ ವಸ್ತುವೂ ಕಾಲಾಂತರದಲ್ಲಿ ಕ್ಷಯಿಸಬಹುದು,ದುಃಖವನ್ನುಂಟು ಮಾಡಬಹುದು.ಆದರೆ ಪರಮಾತ್ಮನು ಎಂದೆಂದಿಗೂ ಇರುತ್ತಾನೆ ಮತ್ತು ಯಾವಾಗಲೂ ಆನಂದ ,ನೆಮ್ಮದಿ,ಶುಭವನ್ನುಂಟು ಮಾಡುತ್ತಾನೆ.ಆದುದರಿಂದ ಅವನು ಎಲ್ಲಕ್ಕಿಂತಲೂ ಶ್ರೇಷ್ಠನು. ಅಂಬರ(ಆಕಾಶ)ಕ್ಕಿಂತ ಉದ್ಗತ (ಮೇಲಕ್ಕೆ) ಕಾರಣವಾಗಿ ಎದ್ದು ಕೊಂಡಿರುತ್ತಾನೆ.ಆದ್ದರಿಂದ ‘ಉದುಂಬರನು’. ಸಂಸಾರವನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುತ್ತಾರೆ. ಅಂದರೆ ನಾಳೆಗೆ ಉಳಿಯುತ್ತಾನೆ. ಅಶಾಶ್ವತವಾದುದು ಎಂದು ಅರ್ಥ.ಈ ಸಂಸಾರವು ಪರಮಾತ್ಮನಿಂದಾಗಿ ಇರುವದರಿಂದ ಅವನಿಗೆ ಈ ‘ಅಶ್ವತ್ಥ’ ನೆಂಬ ಈ ಹೆಸರು.ಆಂಧ್ರಕ್ಕೆ ಸೇರಿದ ಚಾಣೂರನೆಂಬ ದುಷ್ಟ ಮಲ್ಲನನ್ನು ಕೊಂದನು. ಆದ್ದರಿಂದ ಚಾಣೂರಾಂಧ್ರನಿಷೂದನನು.

300x250 AD

ಈ ಶ್ಲೋಕದ ವೈಶಿಷ್ಟ್ಯತೆ:- ಈ ಸ್ತೋತ್ರವನ್ನು ಶ್ರವಣ ನಕ್ಷತ್ರದ ೪ ನೆ ಪಾದದಲ್ಲಿ ಜನಿಸಿದವರು ಪ್ರತಿನಿತ್ಯ ೧೧ ಬಾರಿ ಹೇಳಿಕೊಳ್ಳಬೇಕು. ಮಾನವನಿಗೆ ಆಂತರಿಕ ಹಾಗೂ ಬಾಹ್ಯ ಎಂಬ ಇಬ್ಬರು ಶತ್ರುಗಳಿರುತ್ತಾರೆ. ನಮ್ಮೊಳಗೆ ಇರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಇವು ಆಂತರಿಕ ಶತ್ರುಗಳು.ನಮ್ಮನ್ನು ನಿಂದಿಸುವವರು, ಆಡಿಕೊಳ್ಳುವವವರು,ಅಸೂಯೆಪಡವವರು, ಅಸಹನೆ, ರೋಷ ,ಆವೇಶದಿಂದ ಕುದಿಯುವವರು ನಮ್ಮ ಬಾಹ್ಯ ಶತ್ರುಗಳು.ಇಂತಹ ಆಂತರಿಕ, ಬಾಹ್ಯ ಶತ್ರುಗಳ ಬಾಧೆಯಿಂದ ಮುಕ್ತರಾಗಿ, ಶಾಂತಿ ಸಮಾಧಾನ ಪಡೆಯಲು ಯಾವದೇ ನಕ್ಷತ್ರದಲ್ಲಿ ಹುಟ್ಟಿದ್ದರೂ ನಾವು ಹೇಳಿಕೊಳ್ಳಬೇಕಾದ ಸ್ತೋತ್ರವು ಮೇಲಿನದು ಇರುತ್ತದೆ.(ಸಂ:-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ).

Share This
300x250 AD
300x250 AD
300x250 AD
Back to top