Slide
Slide
Slide
previous arrow
next arrow

ರಂಗಾಯಣ ಚಟುವಟಿಕೆ : ಕಲಾವಿದರಿಂದ ಅರ್ಜಿ ಆಹ್ವಾನ

300x250 AD

ಕಾರವಾರ: ಮೈಸೂರು ರಂಗಾಯಣವು ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಅಧಿಕೃತ ರೆಪರ್ಟರಿಯಾಗಿದ್ದು, ಕಲಾಮಂದಿರದ ಆವರಣದಲ್ಲಿ ಕಚೇರಿಯನ್ನು ಹೊಂದಿದ್ದು, ರಂಗಶಿಕ್ಷಣ, ರಂಗತರಬೇತಿ, ನಾಟಕಗಳ ಸಿದ್ಧತೆ, ಪ್ರದರ್ಶನ, ರಂಗಶಿಬಿರಗಳು ಹೀಗೆ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 35 ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಗಳು ನಡೆಯುತ್ತಿವೆ. ರಂಗಾಯಣವು ಸಿದ್ಧಪಡಿಸುವ ನಾಟಕಗಳಿಗೆ ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ ಕಲಾವಿದರು ಅರ್ಜಿ ಸಲ್ಲಿಸಬಹುದು.
ರಾಷ್ಟ್ರೀಯ ನಾಟಕ ಶಾಲೆಯ ಪದವಿ/ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ/ಡಿಪ್ಲೊಮೋ/ರಾಜ್ಯ ಸರ್ಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ರಂಗಭೂಮಿ ಅನುಭವ ಅಪೇಕ್ಷಣೀಯ. ಅರ್ಹತೆಯುಳ್ಳ 22 ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ರಂಗಾಯಣದ ನಿಯಮಾನುಸಾರ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ಅರ್ಜಿಯನ್ನು ನಿರ್ದೇಶಕರು, ರಂಗಾಯಣ, ವಿನೋಬಾ ರಸ್ತೆ, ಮೈಸೂರು-05 ಈ ವಿಳಾಸಕ್ಕೆ ಸಲ್ಲಿಸುವುದು. ಸಂದರ್ಶನವನ್ನು ಸೆಪ್ಟೆಂಬರ್ 10 ರಂದು ನಡೆಸಲಾಗುವುದು. ಅರ್ಜಿ ನಮೂನೆಯನ್ನು ರಂಗಾಯಣದ ವೆಬ್‌ಸೈಟ್ http://rangayanamysore.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ರಂಗಾಯಣದ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು.
ಸಂದರ್ಶನದ ಹಾಜರಾಗುವ ವೇಳೆ ಜನ್ಮ ದಿನಾಂಕ ದೃಢೀಕರಣ ಪತ್ರ, ಎನ್.ಎಸ್.ಡಿ / ಡಿಪ್ಲೊಮೋ ಪ್ರಮಾಣ ಪತ್ರ, ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ, ರಂಗಭೂಮಿ ಅನುಭವ ಕುರಿತ ಸ್ವವಿವರ ಪತ್ರ, ಆಧಾರ್ ಕಾರ್ಡ್ ಇತರೆ ದಾಖಲೆಗಳೊಂದಿಗೆ ಹಾಜರಾಗುವಂತೆ ರಂಗಾಯಣದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top