ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ, ಶೇವಾಳಿ, ಯರಮುಖ ಹಾಗೂ ಇನ್ನೂ ಕೆಲವು ಭಾಗಗಳಲ್ಲಿ ಅಡಿಕೆಗೆ ಕೊಳೆ ರೋಗ ಬಂದ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳಾದ ಸಂತೋಷ ಎಕ್ಕಳ್ಳಿಕರ ಹಾಗೂ ಯಲ್ಲಾಲಿಂಗ ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಎಕ್ಕಳ್ಳಿಕರ ಅವರು ಮಾತನಾಡಿ ಮೇ ತಿಂಗಳಲ್ಲಿ ಯಾರು ಔಷಧ ಸಿಂಪಡಣೆ ಮಾಡಿದ್ದಾರೋ ಅಂಥವರ ತೋಟಗಳಿಗೆ ಕೊಳೆ ರೋಗ ಹೆಚ್ಚಾಗಿ ಬಂದಿಲ್ಲ, ಹೂ ಬಿಡುವ ಸಮಯದಲ್ಲಿಯೇ ಔಷಧ ಸಿಂಪಡಣೆ ಮಾಡಬೇಕು. ಕೊಳೆ ರೋಗ ತಡೆಗಟ್ಟಲು ತೋಟಗಳಿಗೆ ಸುಣ್ಣ ಹಾಕಬೇಕು, ಇದರಿಂದ ಜಮೀನಿನಲ್ಲಿ ಹುಳಿ ಅಂಶ ಕಡಿಮೆ ಆಗುತ್ತದೆ. ಟೈಕೊಡರ್ಮಾ ಹಾಗೂ ಸುಡಮೊನಸ್ ಬಳಸಿ ಇದರಿಂದ ಕೊಳೆ ಕಡಿಮೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಕಚೇರಿಗೆ ಬಂದು ಭೇಟಿ ನೀಡಿ ಎಂದರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ ದೇಸಾಯಿ, ನಂದಿಗದ್ದೆ ಭಾಗದ ವಿ.ಐ ಸದಾಶಿವ, ಸದಾನಂದ ಹೆಗಡೆ, ಆರ್.ಎ ಭಟ್ಟ, ನರಸಿಂಹ ಭಟ್ಟ, ಸದಾಶಿವ ದೇಸಾಯಿ, ಶ್ರೀನಿವಾಸ ಭಟ್ಟ ಕೊಂಬಾ, ಸುಬ್ರಾಯ ದಬಗಾರ, ಅನಂತ ದೇಸಾಯಿ, ಹರೀಶ ಶ್ರೀನಿವಾಸ ಭಟ್, ಸಂದೇಶ ದೇಸಾಯಿ, ಟಿ.ಕೆ.ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.