ಶಿರಸಿ: ಅಪರಾಧ ಕೃತ್ಯಗಳನ್ನೆಸಗಿ ಹಾಗೂ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಂದ ಕಣ್ತಪ್ಪಿಸಿಕೊಳ್ಳಲು ವಾಹನಗಳಿಗೆ ವಿವಿಧ ರೀತಿಯಲ್ಲಿ ದೋಷಪೂರಿತ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಂಡ ವಾಹನ ಸವಾರರ ಮೇಲೆ ಶಿರಸಿ ನಗರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ವಾಹನಗಳಿಗೆ ದೋಷಪೂರಿತ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಂಡಿದ್ದ ವಾಹನ ಸವಾರರ ವಿರುದ್ದ ಭಾರತೀಯ ಮೊಟಾರು ವಾಹನ ಕಾಯ್ದೆ ಕಲಂ 177 R/w ನಿಯಮ 51 ರಡಿಯಲ್ಲಿ ಒಟ್ಟು 30 ಪ್ರಕರಣಗಳನ್ನು ದಾಖಲಿಸಿ 15000 ರೂ. ದಂಡ ವಿಧಿಸಿದ್ದಾರೆ.
ಅಲ್ಲದೆ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಟ್ರಿಪ್ಪಲ್ ರೈಡಿಂಗ್,ಸೇರಿದಂತೆ ಒಟ್ಟು 39 ಪ್ರಕರಣಗಳನ್ನು ದಾಖಲಿಸಿ 20,500/- ರೂ ದಂಡ ವಿಧಿಸಲಾಗಿದೆ. ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆಎಲ್,ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ. ನೇತೃತ್ವದಲ್ಲಿ ಎಎಸ್ಐ ನಾರಾಯಣ ರಾಥೋಡ್,ಸಿಬ್ಬಂದಿಗಳಾದ ಮಂಜುನಾಥ ಪಾವಗಡ,ಪೂಜಣ್ಣ ದಂಡಿನ್,ಉಮೇಶ ಪೂಜಾರಿ ,ಸುಭಾಷ ಸಾಲುಮಂಟಪ,ಸಂಜಿವ್ ಕಮತಿ, ದೀಪಾ ಎಚ್., ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.